Home ಸಿನಿ ಪವರ್ 25 ವರ್ಷದ ನಂತರ ಶಿವಣ್ಣ-ಉಪ್ಪಿ ಮತ್ತೊಂದು 'ಓಂ'ಕಾರ ಬರೀತಾರಾ? ಅಷ್ಟಕ್ಕೂ ಪವರ್​​​ ಟಿವಿ ಸ್ಟುಡಿಯೋದಲ್ಲಿದ್ದ ಶಿವಣ್ಣಗೆ...

25 ವರ್ಷದ ನಂತರ ಶಿವಣ್ಣ-ಉಪ್ಪಿ ಮತ್ತೊಂದು ‘ಓಂ’ಕಾರ ಬರೀತಾರಾ? ಅಷ್ಟಕ್ಕೂ ಪವರ್​​​ ಟಿವಿ ಸ್ಟುಡಿಯೋದಲ್ಲಿದ್ದ ಶಿವಣ್ಣಗೆ ಉಪ್ಪಿ ಕೊಟ್ಟ ಸರ್​ಪ್ರೈಸ್​ ಏನು?

ಒಬ್ರು ನಟನಾಗಿ ‘ಅನಂತ ಅವತಾರ’ದಲ್ಲಿ ಕಾಣಿಸಿಕೊಂಡು ‘ತರ್ಲೆ ನನ್ಮಗ’ನಿಗೆ ಆ್ಯಕ್ಷನ್ ಕಟ್ ಹೇಳೋ ಮೂಲಕ ನಟನೆ ಜೊತೆಗೆ ಡೈರೆಕ್ಷನ್​ನಲ್ಲೂ ತೊಡಗಿಸಿಕೊಂಡವರು. ಇನ್ನೊಬ್ರು ‘ಆನಂದ್​’, ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’.. ಹೀಗೆ ತನ್ನ ಮೊದಲ ಮೂರು ಸಿನಿಮಾಗಳಲ್ಲೇ ಗೆದ್ದು ಹ್ಯಾಟ್ರಿಕ್ ಹೀರೋ ಆದವರು. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಇವರಿಬ್ಬರು ಕನ್ನಡ ಚಿತ್ರರಂಗಕ್ಕೆ ಹೊಸತನದ ‘ಓಂ’ಕಾರ ಬರೆದವರು…

ಇಷ್ಟು ಪೀಠಿಕೆ ಹೇಳಿದ್ರೆ ಸಾಕು.. ಆಟ ಆಡೋ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗೂ ಎಲ್ರಿಗೂ ಗೊತ್ತಾಗುತ್ತೆ.. ನಾವ್ ಹೇಳ್ತಿರೋದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಬಗ್ಗೆ ಅಂತ. ಉಪ್ಪಿ ಮತ್ತು ಶಿವಣ್ಣ ಬಗ್ಗೆ ಸ್ಟೋರಿ ನೋಡ್ತಾನೇ ಇರ್ತೀವಿ. ಆದರೆ, ಈಗಿಲ್ಲಿ ಉಪ್ಪಿ ಮತ್ತು ಶಿವಣ್ಣ ಕಾಂಬಿನೇಷನ್ ಬಗ್ಗೆ ಮಾತಾಡ್ತಿದ್ದೀವಿ ಅಂದ್ರೆ ಅದಕ್ಕೆ ಕಾರಣ ಇವರಿಬ್ಬರು ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಅನ್ನೋದು..!

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್​ವುಡ್​​ನ ಸೂಪರ್ ಸ್ಟಾರ್​ಗಳು.. ಇವರಿಬ್ಬರದ್ದು ಮೆಗಾ ಕಾಂಬಿನೇಷನ್. 1995ರಲ್ಲಿ ತೆರೆಕಂಡ ‘ಓಂ’ ಚಿತ್ರ ಹೊಸ ಇತಿಹಾಸವನ್ನೇ ಬರೆದಿತ್ತು. ರೌಡಿಸಂ, ಭೂಗತ ಲೋಕದ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ಸ್ಯಾಂಡಲ್​ವುಡ್​ಗೆ ಹೊಸ ಆಯಾಮ ನೀಡಿದ್ದು ಇದೇ ‘ಓಂ’..!

ಉಪೇಂದ್ರ ಆ್ಯಕ್ಷನ್ ಕಟ್ ಹೇಳಿದ್ದ ಈ ಸಿನಿಮಾದ ನಾಯಕ ನಟ ಶಿವರಾಜ್​ಕುಮಾರ್ ಅವರು. ಶಿವಣ್ಣ ಹಾಗೂ ಉಪ್ಪಿಯ ಕಾಂಬಿನೇಷನ್ ಬರೀ ದಾಖಲೆ ಬರೆಯಲಿಲ್ಲಾ.. ಅದುವರೆಗಿದ್ದ ಒಂದು ರೀತಿಯ ಮಡಿವಂತಿಕೆ, ಚೌಕಟ್ಟನ್ನು ಮೀರಿ ಚಂದನವನಕ್ಕೆ ಹೊಸತನವನ್ನು ನೀಡಿತು.  ಸಿನಿಮಾ ತೆರೆಕಂಡು ಎರಡು ದಶಕಗಳೇ ಕಳೆದಿವೆ..ಆದರೂ ‘ಓಂ’ ಸದ್ದು ಮಾತ್ರ ಇನ್ನೂ ಅಡಗಿಲ್ಲ..! ಉಪ್ಪಿ, ಶಿವಣ್ಣ ಅಂದಾಗ ಫಸ್ಟ್ ನೆನಪಾಗೋದೇ ಈ ‘ಓಂ’.

‘ಓಂ’  ಆದ್ಮೇಲೆ ಉಪ್ಪಿ ಮತ್ತು ಶಿವಣ್ಣ 2000ರಲ್ಲಿ ಮತ್ತೆ ಒಂದಾದ್ರು.. ರಾಜೇಂದ್ರ ಬಾಬು ನಿರ್ದೇಶನದ ‘ಪ್ರೀತ್ಸೆ’ ಸಿನಿಮಾದಲ್ಲಿ ಶಿವಣ್ಣ, ಉಪ್ಪಿ ಸ್ಕ್ರೀನ್ ಶೇರ್ ಮಾಡಿಕೊಂಡ್ರು. ಆ ಸಿನಿಮಾ ಕೂಡ ಹಿಟ್ ಆಯ್ತು..! ಅದಾದ್ಮೇಲೆ ಮತ್ತೆ 7 ವರ್ಷದ ನಂತರ ಸಾಯಿ ಪ್ರಕಾಶ್ ನಿರ್ದೇಶನದ ‘ಲವ ಕುಶ’ ಸಿನಿಮಾದಲ್ಲಿ ಶಿವಣ್ಣ, ಉಪ್ಪಿ ಅಭಿನಯಿಸಿದ್ರು..! ಇದು ಕೂಡ ಸೂಪರ್ ಹಿಟ್​..!

ಉಪ್ಪಿ ಮತ್ತು ಶಿವಣ್ಣ ಕಾಂಬಿನೇಷನ್​ ಸಿನಿಮಾ ಬರದೇ 12 ವರ್ಷವಾಗಿದೆ. ಅದರಲ್ಲೂ ಉಪ್ಪಿ ನಿರ್ದೇಶನ. ಶಿವಣ್ಣ ನಟನೆಯ ಸಿನಿಮಾ ಓಂ ನಂತ್ರ ಬಂದೇ ಇಲ್ಲ..! ಇನ್ನೊಂದು ವರ್ಷ ಕಳೆದ್ರೆ ಅಂದ್ರೆ 2020 ಮೇ 19ಕ್ಕೆ ಓಂ ರಿಲೀಸ್ ಆಗಿ 25 ವರ್ಷವಾಗುತ್ತೆ…! ಈ ಸಂದರ್ಭದಲ್ಲಿ ಉಪ್ಪಿ ಮತ್ತು ಶಿವಣ್ಣ ಮತ್ತೆ ಅಂಥಾ ಒಂದು ಸಿನಿಮಾ ಮಾಡುವ  ಇಂಗಿತ ವ್ಯಕ್ತಪಡಿಸಿದ್ದಾರೆ..!

ಹೌದು, ಪವರ್ ಟಿವಿ ಸ್ಟುಡಿಯೋದಲ್ಲಿ  ಈ ಇಬ್ಬರು ಸ್ಟಾರ್​​ಗಳಿಂದ ಮತ್ತೆ ಒಟ್ಟಿಗೇ ಸಿನಿಮಾ ಮಾಡುವ ಯೋಚನೆ ರಿವೀಲ್ ಆಗಿದೆ..! ‘ರುಸ್ತುಂ’ ಯಶಸ್ಸಿನ ಖುಷಿಯಲ್ಲಿರುವ ಶಿವಣ್ಣ ಪವರ್ ಟಿವಿ ಸ್ಟುಡಿಯೋಕ್ಕೆ ಬಂದಿದ್ರು. ಅವರು ಲೈವ್​ ಇಂಟರ್​ವ್ಯೂನಲ್ಲಿರುವಾಗ ಉಪೇಂದ್ರ ಅವರ ಸರ್​ಪ್ರೈಸ್ ಕಾಲ್ ಬಂತು..! ಐ ಲವ್​ ಯು ಸಕ್ಸಸ್ ಖುಷಿಯಲ್ಲಿರುವ ಉಪ್ಪಿ ಹಾಗೂ ರುಸ್ತುಂ ಶಿವಣ್ಣ ಪರಸ್ಪರ ವಿಶ್ ಮಾಡಿಕೊಂಡ್ರು.

ಕಣ್ಣಲ್ಲಿ ಆ್ಯಕ್ಟ್ ಮಾಡೋದನ್ನು ಹೇಳಿಕೊಟ್ಟಿದ್ದೇ ಉಪ್ಪಿ ಅಂತ ಶಿವಣ್ಣ ಹೇಳಿದ್ರು..! ನನ್ನ ದೊಡ್ಡ ಡೈರೆಕ್ಟರ್ ಮಾಡಿದ್ದೇ ನೀವು ಶಿವಣ್ಣ ಅಂತ ಪ್ರೀತಿಯಿಂದ ಹೇಳಿದ್ರು ಉಪ್ಪಿ..! ನಂತ್ರ ನಿಮ್ಮ ಪವರ್ ಟಿವಿ ವೇದಿಕೆಯಲ್ಲೇ ಉಪ್ಪಿ ಮತ್ತು ಶಿವಣ್ಣ ಕಾಂಬಿನೇಷನ್​ನಲ್ಲಿ ಮತ್ತೊಂದು ಮೂವಿ ಬರುವ ಸೂಚನೆಯೂ ಸಿಕ್ತು..!

ಒಂದೊಳ್ಳೆ ಸ್ಕ್ರಿಪ್ಟ್ ಸಿಗ್ಬೇಕು. ಭಗವಂತ ತಲೇಲಿ ಐಡಿಯಾ ಕೊಟ್ರೆ, ಫಸ್ಟ್ ಶಿವಣ್ಣನ ಮನೆಗೆ ಹೋಗ್ತೀನಿ. ಆದಷ್ಟು ಬೇಗ ಆ ದಿನ ಬರಲಿ ಅಂತ ಉಪೇಂದ್ರ ಹೇಳಿದ್ದರು. ಶಿವಣ್ಣ ಕೂಡ ನಗುಮೊಗದಿಂದ ಉಪ್ಪಿ ನಿರ್ದೇಶನದಲ್ಲಿ ಮತ್ತೆ ಸಿನಿಮಾ ಮಾಡೋ ಇಂಗಿತ ವ್ಯಕ್ತಪಡಿಸಿದ್ರು. ಎಲ್ಲಾ ಅಂದುಕೊಂಡಂತೆ ನಡೆದ್ರೆ ‘ಓಂ’ ತೆರೆಕಂಡ 25 ವರ್ಷಗಳ ಸಂಭ್ರಮಾಚರಣೆ ವೇಳೆಯಲ್ಲಿ ಉಪ್ಪಿ ಮತ್ತು ಶಿವಣ್ಣ ಚಂದನವನಕ್ಕೆ ಮತ್ತೊಂದು ಹೊಸ ಆಯಾಮದ ‘ಓಂ’ಕಾರ ಬರೆಯಲಿದ್ದಾರೆ..! ಆದಷ್ಟು ಬೇಗ.. ಆ ಸ್ವೀಟ್​ ನ್ಯೂಸ್ ಬರಲಿ ಅನ್ನೋದು ನಮ್ಮ ಆಶಯ ಕೂಡ.

-ಶಶಿಧರ್ ಎಸ್ ದೋಣಿಹಕ್ಲು

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments