ತಲೆ ಇದ್ದವರಿಗೆ ಮಾತ್ರ ‘ಬುದ್ಧಿವಂತ’ ಪ್ರಶ್ನೆ..!

0
732

ಉಪೇಂದ್ರ ಈ ಹೆಸರು ಗಾಂಧಿನಗರದಲ್ಲಿ ಸುದ್ದಿಯಲ್ಲಿ ಇದೆ ಅನ್ನೊದು ಗೊತ್ತಾದ್ರೆ ಸಾಕು , ನಮ್ಮ ತಲೆ ಏನಾದರೊಂದು ಹೊಸತನ್ನ ಹುಡುಕೋಕೆ ಶುರು ಮಾಡುತ್ತೆ..! ಇದ್ದಲ್ಲೇ ಒಮ್ಮೆ ಕಸಿವಿಸಿ ಗೊಳ್ಳುತ್ತೆ. ತಲೆಗೆ ಕೈಹಾಕಿ ಪರಪರ ಕೆರೆದು ಕೊಳ್ಳಬೇಕು ಅನ್ನಿಸುತ್ತೆ! ಇನ್ನೇನು ಮಾಡಹೊರಟರಪ್ಪ ಈ ಮಹಾನುಭಾವರು ಅನ್ನೊ ಮಟ್ಟಿಗೆ ಈ ಉಪೆಂದ್ರ ಕನ್ನಡಿಗರ ನಿದ್ದೆಗೆಡಿಸಿರುವುದಂತೂ ನಿಜನೇ.
‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಅನ್ನೊ ಮಾತು ಈ ಮನುಷ್ಯನಿಗೆ ಹೇಳಿಮಾಡಿಸಿದ್ದು ಅಂದ್ರೆ ತಪ್ಪೇ ಇಲ್ಲ . ಇದಕ್ಕೆ ಉದಾಹರಣೆಗಳನ್ನ ಬೇಜಾನ್ ಕೊಟ್ಟು ತಾನು ಏನು? ತನ್ನ ತಲೆ ಏನು? ತನ್ನ ಯೋಚನಾ ಲಹರಿ ಏನು ಎಂಬುದನ್ನ ತನ್ನ ಅಭಿಮಾನಿಗಳಿಗೆ ಎತೇಚ್ಛವಾಗಿ ತೋರಿಸಿಕೊಟ್ಟಿರೋ ‘ಬುದ್ಧಿವಂತ’ ನಿರ್ದೇಶಕ ಈ ಉಪೇಂದ್ರ.
ಉಪ್ಪಿ ನಿರ್ದೇಶನದ ಪ್ರತಿಯೊಂದು ಸಿನಿಮಾದಲ್ಲಿ ಹಾಡುಗಳು, ಸೀನ್​​ಗಳು, ಡೈಲಾಗ್​ಗಳು ವಿಶೇಷ. ಟೈಟಲ್​ ಅಂತೂ ವಿಭಿನ್ನ ಮತ್ತು ವಿಚಿತ್ರ ಅಂದ್ರೂ ತಪ್ಪೇ ಇಲ್ಲ ಕಣ್ರೀ.
ಹಾಗಾಗಿ ಈ ಭಾರಿ ಉಪ್ಪಿ ತಲೆಯಲ್ಲಿದ್ದ ಒಂದು ಹುಳವನ್ನ ತನ್ನ ಅಭಿಮಾನಿಗಳ ತಲೆಗೆ ಬಿಡೋದ್ರ ಜೊತೆಗೆ ಏನಿದು ಗೆಸ್​ ಮಾಡಿ ಅಂದಿದ್ದಾರೆ. ನಿಜ ರೀ ನಮ್ಮ ನಾಡಿನ ‘ಬುದ್ಧಿವಂತ’ ಅಭಿಮಾನಿಗಳಿಗೋಸ್ಕರವೇ ಬಿಡುಗಡೆ ಮಾಡಿರೋ ಈ ಟೈಟಲ್​ ಏನಿದು ಅಂತ ಗೆಸ್​ ಮಾಡಿ ಅಂತ ಕೂಡ ಉಪ್ಪಿಯವರೇ ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ಪ್ರಶ್ನಾರ್ಥಕ ಚಿನ್ಹೆ ಇದ್ದ ಹಾಗೆ ಇದ್ರೂ ಇದರಲ್ಲಿ ಉಪೇಂದ್ರರ ಮುಖ ಕೂಡ ಇದೆ, ಅಂದ್ರೆ ಇವರದ್ದೇ ಸಿನಿಮಾ ಅನ್ನೋದು ಪಕ್ಕಾ. ಜೊತೆಗೆ ತಲೆಮೇಲೆ ಟೋಪಿಕೂಡ ಇರೋದು ಇದೂ ಟೋಪಿವಾಲ ಟೂ ನಾ? ಅನ್ನೋ ಪ್ರಶ್ನೆ ಕೂಡ ನಮ್ಮ ತಲೆಗೆ ಬರುತ್ತೆ.
ಈ ರೀತಿಯಾಗಿ ಸಿನಿಪ್ರಿಯರ ತಲೆಯಲ್ಲಿ ಹೊಸದೊಂದು ಹುಳ ಸೇರಿ ಕೊರಿಯೋಕೆ ಶುರು ಮಾಡಿರೋದಂತೂ ಪಕ್ಕಾ ರೀ..

-ಮೋಹನ್​ ಕುಮಾರ್, ಎನ್​.ಆರ್​ ಪುರ

LEAVE A REPLY

Please enter your comment!
Please enter your name here