Monday, January 17, 2022
Powertv Logo
Homeರಾಜ್ಯಅಪ್ಪು ಬಗ್ಗೆ ಬರುತ್ತಿರುವ ಪುಸ್ತಕ ‘ಅಪ್ಪು ಅಮರ’

ಅಪ್ಪು ಬಗ್ಗೆ ಬರುತ್ತಿರುವ ಪುಸ್ತಕ ‘ಅಪ್ಪು ಅಮರ’

ಬೆಂಗಳೂರು/ಭದ್ರಾವತಿ:  ಕನ್ನಡದ ಕಣ್ಮಣಿ ಕನ್ನಡಿಗರ ಪ್ರೀತಿಪಾತ್ರ ಅಪ್ಪು ನಮ್ಮನ್ನಗಲಿ ಒಂದು ತಿಂಗಳ ಮೇಲಾಗಿದ್ದರೂ ಇನ್ನೂ ಜನರು ಅಪ್ಪುವನ್ನು ಮರೆಯಲು ಸಿದ್ಧರಿಲ್ಲ. ಅಪ್ಪು ಸಮಾಧಿಯೆದುರಿರುವ ಜನಸಂದಣಿಯೆ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಅಪ್ಪುವನ್ನು ಜನರು ಇಷ್ಟು ಪ್ರೀತಿಸಲು ಕಾರಣವೇನು ಎಂಬುದು ಹಲವಾರು ಜನಕ್ಕೆ ಗೊತ್ತಿಲ್ಲ. ಹಾಗಾಗಿ ಪುನಿತ್ ಬಗ್ಗೆ ಜನರಿಗೆ ಗೊತ್ತಿಲ್ಲದ ಸಂಗತಿಗಳನ್ನ ಪುಸ್ತಕ ರೂಪದಲ್ಲಿ ಹೊರತರೋದಿಕ್ಕೆ ಪ್ಲಾನ್ ನಡೆಯುತ್ತಿದೆ.

ಅಪ್ಪು ಅಮರ ಹೆಸರಿನ ಈ ಪುಸ್ತಕವನ್ನು ಭದ್ರಾವತಿಯ ರಾಮಾಚಾರಿ ಹಾಗೂ ಅಪ್ಪು ವೆಂಕಟೇಶ್ ಹೊರತರುವ ಸಾಹಸ ನಡೆಸಿದ್ದಾರೆ. ರಾಘವೇಂದ್ರ ರಾಜಕುಮಾರ್​ರನ್ನು ಈ ಪುಸ್ತಕಕ್ಕೆ ಬೆನ್ನುಡಿ ಬರೆದುಕೊಡಲು ಈ ಜೋಡಿ ವಿನಂತಿಸಿಕೊಂಡಿದೆ. ದೊಡ್ಡ ರಂಗೇಗೌಡರು ಬರೆದಿರುವ ಅಪ್ಪು ಕುರಿತ ಹಾಡು ಮತ್ತು ಸುದೀರ್ಘ ಕವಿತೆ ಈ ಪುಸ್ತಕದಲ್ಲಿರಲಿದೆ. ಅಪ್ಪು ಕುರಿತಾದ ಅಭಿಪ್ರಾಯವನ್ನು ಕನ್ನಡದ ಖ್ಯಾತ ನಟ ನಟಿಯರು ಈ ಪುಸ್ತಕದಲ್ಲಿ ಹಂಚಿಕೊಳ್ಳಲಿದ್ದಾರೆ.

ಭದ್ರಾವತಿಯ ಈ ಜೋಡಿ ಅಪ್ಪು ಅವರ ಒಡನಾಡಿಗಳ ಜೊತೆ ಹಾಗೂ ಆಪ್ತರ ಜೊತೆ ಮಾತನಾಡಿ ಪುಸ್ತಕ ಹೊರತರಲು ಪ್ಲಾನ್ ನಡೆಸಿದ್ದಾರೆ. ಪುಸ್ತಕ 500 ಪುಟಗಳ ಭಾರಿ ಗಾತ್ರದಾಗಿರುತ್ತದೆ ಎನ್ನಲಾಗಿದೆ. ಈ ಬಗ್ಗೆ ರಾಘವೇಂದ್ರ ರಾಜಕುಮಾರ್ ಜೊತೆ ಮಾತುಕತೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments