Homeದೇಶ-ವಿದೇಶಮುಂದಿನ ಪ್ರಧಾನಿ ಯಾರೆಂಬುದನ್ನು ಯುಪಿ ಡಿಸೈಡ್ ಮಾಡುತ್ತೆ..!

ಮುಂದಿನ ಪ್ರಧಾನಿ ಯಾರೆಂಬುದನ್ನು ಯುಪಿ ಡಿಸೈಡ್ ಮಾಡುತ್ತೆ..!

ಲಕ್ನೋ: “ಉತ್ತರ ಪ್ರದೇಶ ದೇಶದ ಮುಂದಿನ ಪ್ರಧಾನಿ ಯಾರೆಂಬುದನ್ನು ಡಿಸೈಡ್ ಮಾಡಲಿದೆ. ಹಳೆಯದನ್ನು ಮರೆತು ಬಿಎಸ್​ಪಿ ಹಾಗೂ ಎಸ್​ಪಿ ಕಾರ್ಯಕರ್ತರು ಉತ್ತರ ಪ್ರದೇಶದಲ್ಲಿ ಮೈತ್ರಿಯನ್ನು ಗೆಲ್ಲಿಸಬೇಕು. ಇದುವೇ ನೀವು ನನಗೆ ನೀಡೋ ಹುಟ್ಟುಹಬ್ಬದ ಉಡುಗೊರೆ” ಅಂತ ಮಾಜಿ ಸಿಎಂ ಮಾಯಾವತಿ ತಮ್ಮ ಬರ್ತ್​ಡೇ ದಿನ ಕಾರ್ಯಕರ್ತರಿಗೆ ಕರೆ ನೀಡಿದ್ರು.

“ಈ ಬಾರಿ ನನ್ನ ಬರ್ತ್​ಡೇಯನ್ನು ಲೋಕಸಭಾ ಚುನಾವಣೆಗೆ ಮುನ್ನ ಆಚರಿಸ್ತಾ ಇದ್ದೇನೆ. ಉತ್ತರ ಪ್ರದೇಶದಲ್ಲಿ ನಾವು ಈಗಾಗಲೇ ಮೈತ್ರಿ ಘೋಷಣೆ ಮಾಡಿದ್ದೇವೆ. ಎಸ್​ಪಿ ಜೊತೆಗಿನ ಬಿಎಸ್​ಪಿ ಮೈತ್ರಿ ಬಿಜೆಪಿ ಸೇರಿ ಪ್ರಮುಖ ಪಕ್ಷಗಳ ನಿದ್ದೆಗೆಡಿಸಿದೆ” ಅಂತ ಹೇಳಿದ್ರು.

“ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರ್ತಾರೆ, ಯಾರು ಪ್ರಧಾನಿಯಾಗ್ತಾರೆ ಅನ್ನೋದನ್ನು ಉತ್ತರ ಪ್ರದೇಶ ತೀರ್ಮಾನ ಮಾಡುತ್ತದೆ. ಬಿಎಸ್​ಪಿ ಹಾಗೂ ಎಸ್​ಪಿ ಗೆಲುವಿಗಾಗಿ ಒಟ್ಟಾಗಿ ಹೋರಾಡಬೇಕು. ಎಲ್ಲ ಭಿನ್ನಮತಗಳನ್ನು ಬದಿಗಿರಿಸಿ ಘಟಬಂಧನ್​ನ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡಬೇಕು. ಇದು ನೀವು ನನಗೆ ನೀಡುವ ಹುಟ್ಟುಹಬ್ಬದ ದೊಡ್ಡ ಉಡುಗೊರೆಯಾಗಲಿದೆ ಅಂತ ಕಾಯರ್ಕರ್ತರಿಗೆ ಕರೆ ನೀಡಿದ್ರು.

LEAVE A REPLY

Please enter your comment!
Please enter your name here

- Advertisment -

Most Popular

Recent Comments