Home ರಾಜ್ಯ ಬೆಂಗಳೂರು ಜೂನ್​ 21ರವರೆಗೂ 11 ಜಿಲ್ಲೆಗಳು ‘ಲಾಕ್’

ಜೂನ್​ 21ರವರೆಗೂ 11 ಜಿಲ್ಲೆಗಳು ‘ಲಾಕ್’

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಕಂಟ್ರೋಲ್​​ಗೆ ಬರುತ್ತಿರುವುದರಿಂದ ಸರ್ಕಾರ ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡಲು ತೀರ್ಮಾನಿಸಿದೆ. ತಜ್ಞರ ಜೊತೆ ಸಭೆ ನಡೆಸಿದ್ದ ಸಿಎಂ, 11 ಜಿಲ್ಲೆಗಳಲ್ಲಿ ಲಾಕ್‌ ಡೌನ್‌ ವಿಸ್ತರಣೆ ಹಾಗೂ 19 ಜಿಲ್ಲೆಗಳಲ್ಲಿ ಅನ್​​​ಲಾಕ್​​ಗೆ ಗ್ರೀನ್ ಸಿಗ್ನಲ್​ ಕೊಟ್ಟಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನದಲ್ಲಿ ಮಂಡ್ಯ, ಮೈಸೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಕೊರೋನಾ ಹೆಚ್ಚಿರೋ ಕಾರಣ ಲಾಕ್​ ಅಸ್ತ್ರ ಕಂಟಿನ್ಯೂ ಮಾಡಿದ್ದು, ಉಳಿದ ಜಿಲ್ಲೆಗಳಿಗೆ ಕೆಲ ನಿರ್ಬಂಧ ವಿಧಿಸಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಅನ್ ಲಾಕ್ ಜಿಲ್ಲೆಗಳಲ್ಲಿ ಯಾವುದಕ್ಕೆಲ್ಲಾ ಗ್ರೀನ್‌ ಸಿಗ್ನಲ್‌

 • ಶೇ.50ರಷ್ಟು ಸಿಬ್ಬಂದಿ ಬಳಸಿ ಕಾರ್ಖಾನೆ ಆರಂಭ
 • ಶೇ.30ರಷ್ಟು ಸಿಬ್ಬಂದಿ ಬಳಸಿ ಗಾರ್ಮೆಂಟ್ಸ್​ ಆರಂಭ
 • ಮಧ್ಯಾಹ್ನ 2 ಗಂಟೆವರೆಗೂ ಅಗತ್ಯ ವಸ್ತು ಖರೀದಿಗೆ ಅವಕಾಶ
 • ಮಧ್ಯಾಹ್ನ 2ರವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ
 • ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಕ್ಕೆ ಅವಕಾಶ
 • ಸಿಮೆಂಟ್, ಸ್ಟೀಲ್ ಅಂಗಡಿ ಓಪನ್​ಗೆ ಅವಕಾಶ
 • ಬೆಳಗ್ಗೆ 5ರಿಂದ 10ರವರೆಗೆ ಪಾರ್ಕ್‌ಗಳಲ್ಲಿ ವಾಕಿಂಗ್​ ಮಾಡಲು ಅವಕಾಶ
 • ಸರ್ಕಾರಿ ಕಚೇರಿಗಳಲ್ಲಿ ಶೆ.50 ಸಿಬ್ಬಂದಿ ಕೆಲಸಕ್ಕೆ ಅನುಮತಿ
 • ಅಗತ್ಯವಸ್ತುಗಳ ಖರೀದಿಗೆ ಇದ್ದ ಸಮಯ ವಿಸ್ತರಣೆ
 • ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ
 • ಬಾರ್​ಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಪಾರ್ಸೆಲ್​ಗೆ ಅವಕಾಶ
 • ಎಲ್ಲಾ ಕಟ್ಟಡ ಕಾಮಗಾರಿ ಉಪಕರಣಗಳ ಮಾರಾಟಕ್ಕೆ ಅನುಮತಿ
 • ಕನ್ನಡಕದ ಅಂಗಡಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ2 ಗಂಟೆವರೆಗೆ ಓಪನ್
 • ಅಂತರ್​ ಜಿಲ್ಲಾ ಓಡಾಟಕ್ಕೆ ಅಭ್ಯಂತರವಿಲ್ಲ, ಕಾರು, ಸ್ವಂತ ವಾಹನದಲ್ಲಿ ತೆರಳಬಹುದು

ಯಾವುದಕ್ಕೆಲ್ಲಾ ಬ್ರೇಕ್‌..?

 • ವಾರಾಂತ್ಯದಲ್ಲಿ ರಾಜ್ಯಾದ್ಯಂತ ನೈಟ್​ ಕರ್ಫ್ಯೂ
 • ರಾತ್ರಿ 7ಗಂಟೆಯಿಂದ ಬೆಳಗ್ಗೆ 5ಗಂಟೆಯವರೆಗೆ ನೈಟ್​ ಕರ್ಫ್ಯೂ
 • ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ
 • BMTC, ಕೆಎಸ್​ಆರ್​ಟಿಸಿ ಓಡಾಟಕ್ಕೆ ಅವಕಾಶವಿಲ್ಲ
 • ಬೆಂಗಳೂರಿನಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶವಿಲ್ಲ
 • ಅಂತಾರಾಜ್ಯ ಓಡಾಟಕ್ಕೆ ನಿರ್ಬಂಧ ವಿಧಿಸಿದ ಸರ್ಕಾರ
 • ನೈಟ್ ಕರ್ಫ್ಯೂ ವೇಳೆ ಅಗತ್ಯ ವಸ್ತು ಸಾಗಾಟ ಹೊರತುಪಡಿಸಿ ಉಳಿದೆಲ್ಲವೂ ಬಂದ್

ವೀಕೆಂಡ್ ಕರ್ಫ್ಯೂ ಷರತ್ತುಗಳು..!

 • ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ
 • ರೋಗಿಗಳು & ಸಂಬಂಧಿಕರಿಗೆ ಆಸ್ಪತ್ರೆಗಳಿಗೆ ಹೋಗಲು ಅನುಮತಿ
 • ಮೆಡಿಕಲ್​, ತುರ್ತು ಸೇವೆಗಳಿಗೆ ರಾತ್ರಿಯೂ ಅವಕಾಶ
 • ರೈಲು ಮತ್ತು ವಿಮಾನ ಪ್ರಯಾಣಕ್ಕೆ ಅಡ್ಡಿಯಿಲ್ಲ
 • ವಿಮಾನ, ರೈಲು ಪ್ರಯಾಣಿಕರು ಟಿಕೆಟ್‌ ತೋರಿಸಿ ಪ್ರಯಾಣಿಸಬಹುದು
 • ರಾತ್ರಿ ಪಾಳಯ ಕಚೇರಿ ಮತ್ತು ಕೈಗಾರಿಕೆಗೆ ಅವಕಾಶ
 • ಆದ್ರೆ ರಾತ್ರಿ ಪಾಳಯದ ಕೆಲಸಕ್ಕೆ ಗುರುತಿನ ಚೀಟಿ ಕಡ್ಡಾಯ
 • ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ
 • ಮೀನು, ಮಾಂಸದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಓಪನ್
 • ರಸ್ತೆ ಬದಿ ವ್ಯಾಪಾರಿಗಳಿಗೆ ಮಧ್ಯಾಹ್ನ2 ಗಂಟೆಯವರೆಗೆ ಓಪನ್
 • ಮದುವೆಗಳಿಗೆ 40 ಜನ ಮೀರದಂತೆ ಅನುಮತಿ
 • ಅಂತ್ಯ ಸಂಸ್ಕಾರಕ್ಕೆ ಐವರಿಗೆ ಮಾತ್ರ ಅವಕಾಶ

ಕೊರೋನಾ ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಸರ್ಕಾರ ಅನ್​​​​​​ಲಾಕ್ ಅಸ್ತ್ರ​​​​ ಪ್ರಯೋಗಿಸಿದೆ. ಇದರ ನಡುವೆ ಜನರು ಕೂಡ ಎಚ್ಚರಿಕೆಯ ಹೆಜ್ಜೆ ಇಡುವುದು ಒಳಿತು. ಸರ್ಕಾರ ನೀಡಿರು ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ವೈರಸ್​ ಮತ್ತೆ ಹರಡುವುದು ಖಂಡಿತಾ ಎಂದು  ತಜ್ಞರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ ಹಿರೇಮಠ ನೇಮಕ

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ್ ಹಿರೇಮಠ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ, ಶಾಸಕ...

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

Recent Comments