ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಭಾರೀ ಬೆಂಬಲ; ಜಾಗತಿಕ ಮಟ್ಟದಲ್ಲಿ ಪಾಕ್​ ಮತ್ತು ಚೀನಾಕ್ಕೆ ಮುಜುಗರ..!

0
306

ವಾಷಿಂಗ್ಟನ್ : ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಭಾರೀ ಬೆಂಬಲ ಸಿಕ್ಕಿದ್ದು, ‘ಪಾಪಿ’ಸ್ತಾನ ಮತ್ತು ಅದರ ಬೆನ್ನಿಗೆ ನಿಂತಿರೋ ಚೀನಾಕ್ಕೆ ತೀವ್ರ ಮುಜುಗರ ಉಂಟಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪುಲ್ವಾಮಾ ದಾಳಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಅಷ್ಟೇ ಅಲ್ಲದೆ ಪಾಕ್​ ಪರ ಬ್ಯಾಟಿಂಗ್ ನಡೆಸಿದ ಚೀನಾಕ್ಕೆ ಭಾರತದ ಎದರು ಮತ್ತೊಮ್ಮೆ ರಾಜತಾಂತ್ರಿಕ ಸೋಲಾಗಿದ್ದು, ಮುಜುಗರಕ್ಕೆ ಒಳಗಾಗಿದೆ.  
ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೊರಾದಲ್ಲಿ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಸಿಆರ್​ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯನ್ನು ಪಾಕ್​ ಪೋಷಿತ ಜೈಶ್ -ಇ-ಮೊಹಮ್ಮದ್​ ಸಂಘಟನೆ ಹೊತ್ತುಕೊಂಡಿತ್ತು. ವಿಶ್ವದ ಬಹುತೇಕ ರಾಷ್ಟ್ರಗಳು ದಾಳಿಯನ್ನು ಖಂಡಿಸಿ ಭಾರತದ ಪರ ನಿಂತರೆ ಚೀನಾ ಮಾತ್ರ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ‘ಪಾಪಿ’ಸ್ತಾಕ್ಕೆ ಬೆಂಬಲ ನೀಡಿದ ತಪ್ಪಿನಿಂದಾಗಿ ಜಾಗತಿಕ ಮಟ್ಟದಲ್ಲಿ ಪಾಕ್​ ಜೊತೆ ಮುಜುಗರವನ್ನು ಹಂಚಿಕೊಳ್ಳ ಬೇಕಾದ ಪರಿಸ್ಥಿತಿ ಚೀನಾದ್ದಾಗಿದೆ.
ಪುಲ್ವಾಮಾ ದಾಳಿಯಲ್ಲಿ ಪಾಕ್​ ಮೂಲದ ಜೈಶ್- ಇ-ಮೊಹಮ್ಮದ್ ಸಂಘಟನೆ ಕೈವಾಡ ಇದೆ ಎಂದು ಉಗ್ರ ಸಂಘಟನೆಯ ಹೆಸರನ್ನು ಪ್ರಸ್ತಾಪಿಸಿದ ವಿಶ್ವ ಸಂಸ್ಥೆ ಭಾರತ ವಾದಕ್ಕೆ ಧ್ವನಿಗೂಡಿಸಿ, ದಾಳಿಯನ್ನು ಖಂಡಿಸಿದೆ.

LEAVE A REPLY

Please enter your comment!
Please enter your name here