Home ದೇಶ-ವಿದೇಶ ಅನ್​ಲಾಕ್ 4.O ಮಾರ್ಗ ಸೂಚಿ ಬಿಡುಗಡೆ : ಸದ್ಯಕ್ಕಿಲ್ಲ ಶಾಲಾ ಕಾಲೇಜುಗಳು!

ಅನ್​ಲಾಕ್ 4.O ಮಾರ್ಗ ಸೂಚಿ ಬಿಡುಗಡೆ : ಸದ್ಯಕ್ಕಿಲ್ಲ ಶಾಲಾ ಕಾಲೇಜುಗಳು!

ನವದೆಹಲಿ: ಕೇಂದ್ರ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಸೆಪ್ಟಂಬರ್​ 7 ರಿಂದ ಬಹುನಿರೀಕ್ಷಿತ ಮೆಟ್ರೋ ಸಂಚಾರ ಆರಂಭವಾಗಲಿದೆ.  ಅಲ್ಲದೆ  ಈ ಮುಂಚೆ ಯಾವುದೇ ಸಭೆ ಸಮಾರಂಭಗಳು ನಡೆಸುವಂತಿರಲಿಲ್ಲ ಆದರೆ ಇದೀಗ  ಸಭೆ-ಸಮಾರಂಭಗಳು ನಡೆಸಬಹುದು, ಆದರೆ ಕೇವಲ 100 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಜನರು  ಪಾಲ್ಗೊಳ್ಳುವುದು ಅವಕಾಶ. ಸೆ. 21 ಓಪನ್​ ಏರ್​ ಥಿಯೇಟರ್​ ಆರಂಭವಾಗಲಿದೆ. ಅಂತರಾಜ್ಯ ಸಂಚಾರಕ್ಕೆ ಅನುಮತಿ ಇದೆ ಎಂದು ಮಾರ್ಗ ಸೂಚಿಯಲ್ಲಿದೆ.

ಇನ್ನು ಥಿಯೇಟರ್ ಹಾಗೂ ​ಈಜುಕೊಳ ಸದ್ಯಕ್ಕೆ ತೆರೆಯಲು ಅನುಮತಿ ಇಲ್ಲ. ಕೇಂದ್ರದ ಮಾರ್ಗಸೂಚಿಯಂತೆ ಶಾಲಾ ಕಾಲೇಜುಗಳು ಸೆಪ್ಟೆಂಬರ್ 30ರವರೆಗೆ ತೆರೆಯುವಂತಿಲ್ಲ ಬದಲಾಗಿ ಆನ್ ಲೈನ್ ತರಗತಿಗಳನ್ನು ಮುಂದುವರೆಸಲು ಸೂಚಿಸಲಾಗಿದೆ. ಕಂಟೈನ್‌ಮೆಂಟ್ ವಲಯಗಳು ಅಲ್ಲದ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ತಮ್ಮ ಹೆತ್ತವರ ಅನುಮತಿಯನ್ನು ಪಡೆದು ಶಾಲೆಗಳಿಗೆ ಭೇಟಿ ನೀಡಬಹುದಾಗಿದೆ.

ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ಸದ್ಯಕ್ಕೆ ಅನುಮತಿಯಿಲ್ಲ, ಬಾರ್​ ಮತ್ತು ರೆಸ್ಟೋರಂಟ್​ಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್ ತೆರೆಯಲು ಅವಕಾಶ ನೀಡಲಾಗುವುದು ಎನ್ನಲಾಗಿದೆ. ಹಂತ ಹಂತವಾಗಿ ಒಂದೊಂದೇ ವಲಯಗಳನ್ನು ಸಡಿಲಿಸುವ ಕ್ರಮ ಕೈಗೊಂಡಿದ್ದು ಮೊದಲ ಹಂತವಾಗಿ ಮೆಟ್ರೋ ಸಂಚಾರ ಆರಂಭಗೊಳ್ಳಲಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಡೆಸಲು ಅನುಮತಿ ನೀಡಲಾಗುವುದು  ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

LEAVE A REPLY

Please enter your comment!
Please enter your name here

- Advertisment -

Most Popular

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ಎಂದು...

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ...

ಜ. 26 ರಂದು ಪರ್ಯಾಯ ರೈತ ಗಣರಾಜ್ಯೋತ್ಸವ ಪರೆಡ್: ಶಾಂತಕುಮಾರ

ಹುಬ್ಬಳ್ಳಿ : ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 26 ರಂದು ರೈತರ ಪರ್ಯಾಯ ಗಣರಾಜ್ಯೋತ್ಸವ ಪರೆಡ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ , ಮೋಟಾರ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

‘ಠಾಕ್ರೆ ಟ್ವೀಟ್ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ’

ಬೆಂಗಳೂರು: ಮಾಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಉದ್ದವ್ ಠಾಕ್ರೆ ಭೂತದಹನ...

Recent Comments