ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮತ್ತೆ ಅಪರಿಚಿತರ ಓಡಾಟ..!

0
213

ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿದ್ದಾರೆ. ಕೆಲವು ಯುವಕರು ಟಿಕೆಟ್ ಪಡೆಯದೇ ಪ್ಲಾಟ್ ​ಫಾರಂ ಬಳಿ ಹೋಗಿದ್ದರೆ, ಇನ್ನಿಬ್ಬರು ಸುರಂಗ ಮಾರ್ಗದ ಟ್ರ್ಯಾಕ್ ಮೇಲೆ ಓಡಾಡುತ್ತಿದ್ದರು. ಬುಧವಾರ ರಾತ್ರಿ 7.30ರಲ್ಲಿ ಇಬ್ಬರು ಯುವಕರ ಎಂಟ್ರಿಯಾಗಿದ್ದು, ಯುವಕರನ್ನು ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಿಬ್ಬಂದಿ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಯಳಂದೂರು ನಿವಾಸಿ ಯದುವೀರ್, ಹುಬ್ಬಳ್ಳಿಯ ಬಂಕಾಪುರ ನಿವಾಸಿ ಶಶಿಧರ್ ಎಂಬವರ ವಿಚಾರಣೆ ನಡೆಸಲಾಗುತ್ತಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here