ಉಗ್ರರ ಸದ್ದಡಗಿಸಿದ ಮಿರಾಜ್ ಬಗ್ಗೆ ನಿಮಗೆಷ್ಟು ಗೊತ್ತು?

0
171

ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ 2, ಹಾಗೂ ಪಾಕ್​ ಗಡಿಯ 1 ಅಡಗು ತಾಣಗಳ ಮೇಲೆ ದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರ ಸಂಹಾರ ಮಾಡಿದ್ದಾರೆ. ರಣಹೇಡಿ ಪಾಕಿಸ್ತಾನ ಪೋಷಿಸುತ್ತಿರುವ ಉಗ್ರರ ನೆಲೆಗಳನ್ನು ಉಡೀಸ್ ಮಾಡಿ, ಉಗ್ರರ ಹುಟ್ಟಡಗಿಸಿದ ಸೇನೆಯ ಶಕ್ತಿ ಮಿರಾಜ್​- 2000 ಯುದ್ಧ ವಿಮಾನ. ಈ ಮಿರಾಜ್​- 2000 ಯುದ್ಧ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಮಿರಾಜ್​- 2000 ಬಗ್ಗೆ ಒಂದಿಷ್ಟು ಮಾಹಿತಿ
*ಉಗ್ರರ ಅಡಗುತಾಣಗಳನ್ನು ನೆಲಸಮ ಮಾಡಿದ ಮಿರಾಜ್ – 2000 ಜೆಟ್​ ಫೈಟರ್​ ಅನ್ನು ನಿರ್ಮಿಸಿರೋದು ಫ್ರಾನ್ಸ್​ನ ಡಸಾಲ್ಟ್​ ಅನ್ನೋ ಕಂಪನಿ. ಈ ಡಸಾಲ್ಟ್ ಕಂಪನಿ ಬಗ್ಗೆ ಬಹುಶಃ ನಿಮ್ಗೆ ಗೊತ್ತಿರಬಹುದು. ಸದ್ಯ ಬಹಳಷ್ಟು ಚರ್ಚೆಗೆ, ವಿವಾದಕ್ಕೆ ಕಾರಣವಾಗಿರೋ ರಾಫೇಲ್​ ಯುದ್ಧ ವಿಮಾನ ಇದೆಯಲ್ಲಾ..? ಇದನ್ನು ತಯಾರಿಸುತ್ತಿರೋ ಕಂಪನಿಯೇ ಡಸಾಲ್ಟ್ ಕಂಪನಿ. ಅದೇ ಡಸಾಲ್ಟ್​ ಕಂಪನಿ ಮಿರಾಜ್​-2000ನ್ನು ನಿರ್ಮಿಸಿರೋದು.
* 1999ರ ಕಾರ್ಗಿಲ್​ ಯುದ್ಧದಲ್ಲೂ ಮಿರಾಜ್​ -2000 ವಹಿಸಿದ್ದ ಪಾತ್ರ ಬಹುಮುಖ್ಯವಾದುದು. ಹಿಮಾಲಯದ ಎತ್ತರ ಪ್ರದೇಶದಲ್ಲಿ ಅಂದು ಮಿರಾಜ್ -​2000 ಜೆಟ್​ ಫೈಟರ್​ ಮಾಡಿದ್ದ ಕೆಲಸ ಶ್ಲಾಘನೀಯ.

* ಆರಂಭದಲ್ಲಿ ಸೀಮಿತ ದಾಳಿ ಸಾಮರ್ಥ್ಯವನ್ನು ಹೊಂದಿತ್ತು. ಬಳಿಕ ಹಲವಾರು ಮಾರ್ಪಾಟುಗಳನ್ನು ಮಾಡಲಾಯಿತು. 1999ರ ಜೂನ್​ -ಜುಲೈನಲ್ಲಿ ಆಪರೇಷನ್​ ಸೇಫ್ಡ್​ ಸಾಗರ್​ನಲ್ಲಿ 2 ಮಿರಾಜ್ ಸ್ಕ್ವಾಡ್ರನ್​ಗಳನ್ನು ಬಳಕೆ ಮಾಡಲಾಗಿತ್ತು.
* ಮೇಲ್ದರ್ಜೆಗೆ ಏರಿದ ಮಿರಾಜ್​ 2000ನ್ನು ಭಾರತ ಪಡೆದಿದ್ದು 2018ರ ಜುಲೈನಲ್ಲಿ.
* ಈ ಮಿರಾಜ್​ 2000 ಗಂಟೆಗೆ 2336 ಕಿಮೀ ವೇಗದಲ್ಲಿ ಸಂಚರಿಸಬಲ್ಲದು.
* ಇದರ ಇಂಧನ ಕೆಪಾಸಿಟಿ 3978 ಲೀಟರ್​ಗಳು
* ಭಾರತೀಯ ವಾಯುಸೇನೆಯ ವಜ್ರದುಂಗುರ ಅಂತ ಮಿರಾಜ್​ ಅನ್ನು ಕರೆಯುತ್ತಾರೆ.
* ಎಂಥಾ ವ್ಯತಿರಿಕ್ತ ವಾತಾವರಣದಲ್ಲೂ ಇದು ಕಾರ್ಯಾಚರಣೆ ನಡೆಸಬಲ್ಲದು.
* ದಟ್ಟ ಅರಣ್ಯವಿರಲಿ, ಹಿಮಾವೃತ ಪ್ರದೇಶಗಳೇ ಆಗಿರಲಿ ಗುರಿಯನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದೆ.
* ಎದುರಾಳಿಗಳು ಅದೆಂಥಾ ದಾಳಿ ಮಾಡಿದ್ರು ಶರವೇಗದಲ್ಲಿ ತಪ್ಪಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.
* ದಾಳಿ ಮಾಡಬೇಕಾದ ಪ್ರದೇಶವನ್ನು ಗುರಿಯಾಗಿಸಿಕೊಂಡು ನಿಖರವಾಗಿ ಅದೇ ಜಾಗದಲ್ಲಿ ಬಾಂಬ್ ದಾಳಿ ಮಾಡಬಲ್ಲದು.
* ಫ್ರಾನ್ಸ್ ಮತ್ತು ಭಾರತವಲ್ಲದೆ, ಈಜಿಫ್ಟ್, ಗ್ರೀಕ್​, ತೈವಾನ್​ ಮತ್ತು ಯುನೈಟೆಡ್​ ಅರಬ್​ ಎಮಿರೇಟ್ಸ್ (ಯುಎಇ) ದೇಶಗಳಲ್ಲೂ ಮಿರಾಜ್​ ಇದೆ.

LEAVE A REPLY

Please enter your comment!
Please enter your name here