ವಾಷಿಂಗ್ಟನ್: ಇಡೀ ವಿಶ್ವವೇ ಕೊರೋನಾ ಸಂಕಷ್ಟವನ್ನು ಎದುರಿಸುತ್ತಿದೆ. ಇತ್ತೀಚೆಗೆ ಭಾರತದಿಂದ ಅಮೆರಿಕಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವೀನ್ ಮಾತ್ರೆಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ ಇದೀಗ ಅಮೆರಿಕಾ ಭಾರತಕ್ಕೆ ವೆಂಟಿಲೇಟರ್ಗಳನ್ನು ದಾನ ನೀಡಲಾಗುತ್ತಿದೆ ಎಂದು ಘೋಷಣೆ ಮಾಡಿದೆ. ಈ ಮೂಲಕ ಭಾರತದೊಂದಿಗಿನ ಸ್ನೇಹ ಸಂಬಂಧವನ್ನು ಅಮೆರಿಕಾ ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾವು ಭಾರತಕ್ಕೆ ವೆಂಟಿಲೇಟರ್ಗಳನ್ನು ದಾನ ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಲು ನನಗೆ ಹೆಮ್ಮೆಯಾಗುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ನಾವು ಭಾರತ ಹಾಗೂ ನರೇಂದ್ರ ಮೋದಿಯವರೊಂದಿಗೆ ನಿಂತಿರುತ್ತೇವೆ. ಅಷ್ಟೆ ಅಲ್ಲ ಕೊರೋನಾಗೆ ವಾಕ್ಸಿನ್ ಕಂಡುಹಿಡಿಯುವಲ್ಲಿ ಕೈ ಜೋಡಿಸುತ್ತೇವೆ. ನಾವು ಜೊತೆಯಾಗಿ ಕಣ್ಣಿಗೆ ಕಾಣದ ಶತ್ರುವನ್ನು ಹೊಡೆದೋಡಿಸೋಣ‘ ಎಂದಿದ್ದಾರೆ.
I am proud to announce that the United States will donate ventilators to our friends in India. We stand with India and @narendramodi during this pandemic. We’re also cooperating on vaccine development. Together we will beat the invisible enemy!
— Donald J. Trump (@realDonaldTrump) May 15, 2020
2instead