ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕಾರು ಇಳಿಯುತ್ತಿದ್ದಂತೆ ಕುಸಿದು ಬಿದ್ದಿರುವ ಘಟನೆ ಚಿತ್ರದುರ್ಗದ ನವೀನ್ ರೆಸಿಡೆನ್ಸಿ ಬಳಿ ನಡೆದಿದೆ.
ಡಿ.ವಿ.ಸದಾನಂದಗೌಡ ಲೋ ಶುಗರ್ ನಿಂದ ಕುಸಿದು ಬಿದ್ದಿದ್ದಾರೆ. ಅಂಗ ರಕ್ಷಕರು ತಕ್ಷಣ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಕೆಲ ಹೊತ್ತಿನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಡಿವಿಎಸ್. ಬೆಂಗಳೂರಿನ ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಯಲ್ಲಿ ಡಿವಿಎಸ್ಗೆ ಚಿಕಿತ್ಸೆ. ಝೀರೋ ಟ್ರಾಫಿಕ್ನಲ್ಲಿ ಸದಾನಂದಗೌಡರನ್ನ ಕರೆತರುತ್ತಿರುವ ಸಿಬ್ಬಂದಿ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶಿವಮೊಗ್ಗ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.