ನವದೆಹಲಿ : ಕೊರೋನಾ ಸೋಂಕಿಗೆ ಔಷಧಿ ಇನ್ನೂ ಕಂಡು ಹುಡುಕಿಲ್ಲವಾದ್ದರಿಂದ ಕೊರೋನಾ ಸೋಂಕಿತರಿಗೆ ಹೆಚ್ಐವಿ ನಿರೋಧಕ ಔಷಧಿಯನ್ನು ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸ್ಸು ಮಾಡಿದೆ.
ಕೊರೋನಾ ಸೋಂಕಿತ ವ್ಯಕ್ತಿಯ ಕಾಯಿಲೆಯ ಗಂಭೀರತೆ ಮತ್ತು ವ್ಯಕ್ತಿಯ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಐವಿ ನಿರೋಧಕ ಡ್ರಗ್ ಕಾಂಬಿನೇಷನ್ ಆದ Lopinavir ಹಾಗೂ Ritonavir ಬಳಸುವಂತೆ ಆರೋಗ್ಯ ಇಲಾಖೆ ನಿನ್ನೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಮತ್ತು ಡಯಾಬಿಟೀಸ್, ದೀರ್ಘಕಾಲದ ಶ್ವಾಸಕೋಶದ ಸಮಸ್ಯೆ, ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕೊರೋನಾ ಸೋಂಕಿರ ವ್ಯಕ್ತಿಗಳ ಚಿಕಿತ್ಸೆಗೆ ಬಳಸುವಂತೆ ಸೂಚಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮತ್ತು ಏಮ್ಸ್ ವೈದ್ಯರ ತಜ್ಞ ಸಮಿತಿಯ ತಂಡ ಚಿಕಿತ್ಸೆಯ ಮಾರ್ಗಸೂಚಿಯನ್ನು ಪರಿಷ್ಕರಿಸಿದ ಬಳಿಕ ಈ ಶಿಫಾರಸ್ಸು ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.