ಈ ಪುಟಾಣಿ ಶ್ವಾನಕ್ಕೆ ಹಣೆ ಮೇಲೂ ಬಾಲ!

0
278

ನಾಯಿಗಳಿಗೆ  ಬಾಲ ಇರೋದು ಕಾಮನ್. ಆದ್ರೆ, ಇಲ್ಲೊಂದು ನಾಯಿಗೆ ಎರಡು ಬಾಲ..!   ಅದೂ ಹಣೆಯಲ್ಲೊಂದು..!

ಹೌದು , ಅಚ್ಚರಿಯಾದ್ರೂ ಇದು ನಿಜ.  ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ನಾಯಿಮರಿಯೊಂದು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಎಲ್ಲಿ ನೋಡಿದ್ರೂ ಆ ಮುದ್ದಾದ ನಾಯಿ ಮರಿಯ ಫೋಟೋ! ಅದರ ಹಣೆಯಲ್ಲಿ ಒಂದು ಪುಟ್ಟ ಬಾಲವಿದ್ದು, ಅದು ಎಲ್ಲರ ಗಮನ ಸೆಳೆಯುತ್ತಿದೆ.

ಬೀದಿ ಬದಿ ಚಳಿಯಿಂದ ನಡುಗುತ್ತಿದ್ದ ಈ ಪುಟಾಣಿ ನಾಯಿಮರಿಯನ್ನು ಮಿಸ್ಸೌರಿ  ಮೂಲದ  ಮ್ಯಾಕ್ಸ್ ಮಿಷನ್​  ಎಂಬ ರಕ್ಷಣಾ ಸಂಸ್ಥೆ  ರಕ್ಷಿಸಿದೆ. ಬಳಿಕ ನಾಯಿಯನ್ನು ಗಮನಿಸಿದಾಗ ಹಣೆ ಮೇಲೆ ಚಿಕ್ಕದಾದ ಬಾಲವಿತ್ತು.

ಇದನ್ನು ವೈದ್ಯರ ಬಳಿ ತೋರಿಸಿ ಎಕ್ಸ್ ರೇ ಮಾಡಿಸಿದಾಗ ಈ ಬಾಲದ ಬೆಳವಣಿಗೆ ತಲೆಯ ಒಳ ಭಾಗಕ್ಕೆ ಯಾವುದೇ ಸಂಪರ್ಕವಿಲ್ಲ ಎಂದು ತಿಳಿದು ಬಂದಿದೆ. ಈ ನಾಯಿ ಮರಿಗೆ ಮ್ಯಾಕ್ಸ್  ಮಿಷನ್ ನಾರ್ವಲ್ ದಿ ಲಿಟಲ್ ಮ್ಯಾಜಿಕಲ್  ಪ್ಯೂರಿ ಯೂನಿಕಾರ್ನ್ ಎಂದು ಹೆಸರಿಟ್ಟಿದ್ದಾರೆ.

LEAVE A REPLY

Please enter your comment!
Please enter your name here