Thursday, September 29, 2022
Powertv Logo
Homeಕ್ರೀಡೆಶಮಿ ಬದಲಿಗೆ ಟಿ-20 ಸರಣಿಗೆ ಉಮೇಶ್ ಯಾದವ್‌ಗೆ ಅವಕಾಶ

ಶಮಿ ಬದಲಿಗೆ ಟಿ-20 ಸರಣಿಗೆ ಉಮೇಶ್ ಯಾದವ್‌ಗೆ ಅವಕಾಶ

ನವದೆಹಲಿ: ವೇಗಿ ಮೊಹಮ್ಮದ್ ಶಮಿ ಅವರಿಗೆ ಕೊರೊನಾ ಪಾಸಿಟಿವ್​ ಧೃಢವಾದ ಹಿನ್ನಲೆಯಲ್ಲಿ ಆಸ್ಟೇಲಿಯಾ ವಿರುದ್ಧ ಟಿ-20 ಯಿಂದ ಸರಣಿಯಿಂದ ಹೊರ ಉಳಿದಿದ್ದಾರೆ.

ಮೊಹಮ್ಮದ್ ಶಮಿ ಕೊವಿಡ್​ ಪರೀಕ್ಷೆ ನಡೆಸಿದ್ದು, ಇದ್ರಲ್ಲಿ ಅವರಿಗೆ ಪಾಸಿಟಿವ್ ಧೃಢವಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ಖಚಿತಪಡಿಸಿದೆ. ಇನ್ನು ಶಮಿ ಬದಲಿಗೆ ಆಸ್ಟೇಲಿಯಾ ವಿರುದ್ಧದ ಟಿ-20 ಸರಣಿಗೆ ವೇಗಿ ಉಮೇಶ್ ಯಾದವ್ ಅವರನ್ನ ಆಯ್ಕೆ ಮಾಡಲಾಗಿದೆ.

ಭಾರತವು ಸೆಪ್ಟೆಂಬರ್ 20 ರಿಂದ ಆಸ್ಟ್ರೇಲಿಯಾ ವಿರುದ್ಧ 3 ಟಿ-20 ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್ 25 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಇನ್ನು ಮುಂಬರುವ ಟಿ-20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಈಗ ಆಸ್ಟೇಲಿಯಾ ಪ್ರವಾಸಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ, ಕೊರೊನಾ ಪಾಸಿಟಿವ್​ ಧೃಢವಾದ ಹಿನ್ನೆಲೆಯಲ್ಲಿ ಭಾರತ ತಂಡದ  ಆಡುವ ಬಳಗದ ಕಣದಿಂದ ಹೊರಗುಳಿದಿದ್ದಾರೆ.

- Advertisment -

Most Popular

Recent Comments