Homeರಾಜ್ಯಇತರೆಪರಿಸರ ಕಾಳಜಿ ಮೆರೆದ ಯುವ ಜೋಡಿ..!

ಪರಿಸರ ಕಾಳಜಿ ಮೆರೆದ ಯುವ ಜೋಡಿ..!

ಉಡುಪಿಯ ಯುವ ಜೋಡಿಯೊಂದು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಮೂಲಕ ಪ್ರಕೃತಿ ಸಂರಕ್ಷಣೆಯ ಕುರಿತು ಕಾಳಜಿ ಮೆರೆದಿದೆ.
ಬೆಂಗಳೂರಿನ ನಿವಾಸಿ ವಿಜಯ ಪಿ ಹಂದೆ ಮತ್ತು ಉಡುಪಿಯ ನಿವಾಸಿ ನಿವೇದಿತಾ ಅವರು ಇದೇ ನವೆಂಬರ್‌ 24 ರಂದು ಉಡುಪಿಯಲ್ಲಿ ಮದುವೆಯಾಗಲಿದ್ದಾರೆ. ಪರಿಸರ ಕಾಳಜಿ ಹೊಂದಿರುವ ಯುವ ಜೋಡಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸೀಡ್ ಪೇಪರ್​​​ನಲ್ಲಿ ಮುದ್ರಿಸಿ ಹಂಚಿದ್ದಾರೆ. ಸೀಡ್ ಪೇಪರ್ ನಲ್ಲಿ ಮಾಡಲಾದ ಈ ಮದುವೆ ಆಮಂತ್ರಣ ಪತ್ರಿಕೆ ಮಣ್ಣಿಗೆ ಎಸೆದರು‌ ಕೂಡ ಅದರಲ್ಲಿನ ಬೀಜಗಳು ಮೊಳೆಕೆಯೊಡೆದು ಹಸಿರಾಗಲಿವೆ. ಸದ್ಯ ಈ ವಿಭಿನ್ನ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌. ಆಮಂತ್ರಣ ಪತ್ರಿಕೆಯ ಮೂಲಕ ಯುವ ಜೋಡಿ ಪರಿಸರ ಕಾಳಜಿ ವ್ಯಕ್ತಪಡಿಸಿರುವುದನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments