HomeP.Specialಕಾರಂತರ ಕೋಟದಲ್ಲಿ ಸಿದ್ಧವಾಗಿದೆ ಕೊರೋನಾ ನಿಗ್ರಹ ಗಣಪ !

ಕಾರಂತರ ಕೋಟದಲ್ಲಿ ಸಿದ್ಧವಾಗಿದೆ ಕೊರೋನಾ ನಿಗ್ರಹ ಗಣಪ !

ಉಡುಪಿ : ರಾಜ್ಯದಲ್ಲಿ ಗಣೇಶ ಚತುರ್ಥಿ ಜನರಲ್ಲಿ ಹೊಸ ಹುರುಪು ನೀಡುತ್ತಿದೆ ಎನ್ನುಬಹುದು. ಯಾಕೆಂದರೆ ಹಬ್ಬದ ಆಚರಣೆಯಲ್ಲಿ ಕೊರೋನಾ ಲಾಕ್ ಡೌನ್ ಸಂಕಷ್ಟ ಮರೆತು ಎಲ್ಲರೂ ಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಕೂಡ ಗಣಪತಿ ಮೂರ್ತಿ ತಯಾರಿ‌ ಕೂಡ ಜೋರಾಗಿಯೇ ಸಾಗಿದೆ. ಕೋಟದಲ್ಲಿ ಸುಮಾರು 45 ವರಗಳಿಂದ ಗಣೇಶ ಮತ್ತು ಶಾರದ ಪೂಜೆಗೆ ಮಣ್ಣಿನ ವಿಗ್ರಹ ಮಾಡುವ ಅನಂತಯ್ಯ ಆಚಾರ್ಯ ಎನ್ನುವವರು ಈ ಬಾರಿ ಕೊರೋನಾ ನಿಗ್ರಹ ಗಣಪನನ್ನು ತಯಾರಿಸಿರುವುದು ಒಂದು ವಿಶೇಷ ಅಕರ್ಷಣೆಯಾಗಿದೆ.

ಆವೆಮಣ್ಣು ಬಳಸಿ ಗಣಪತಿ ಸಿದ್ಧಪಡಿಸಿ ಅದಕ್ಕೆ ಪಾಕೃತಿಕ ಬಣ್ಣ ಬಳಿದು ಗಣಪತಿ ಸಿದ್ಧಪಡಿಸಲಾಗಿದೆ. ವಿಶೇಷವಾಗಿ ಈ ಬಾರಿ ಗಣೇಶ ನ‌ ಪಾದದ ಅಡಿ ಕೊರೋನಾ ವೈರಸ್ ಮಾದರಿಯನ್ನು ಇರಿಸಿರುವುದು ಸದ್ಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿ ಎಲ್ಲಾ ವರ್ಗದ ಜನರಿಗೂ ಕಾಡಿದೆ, ಈ ಗಣೇಶ ಚತುರ್ಥಿ ಯ ದಿನದಂದು ವಿಘ್ನ ನಿವಾರಕನಾದ ಗಣೇಶನು ಕೊರೋನಾ ವೈರಸ್ ಎನ್ನುವ ವಿಘ್ನವನ್ನು‌ ಕೂಡ ನಿವಾರಿಸಲಿ ಎನ್ನುವ ಕಲ್ಪನೆಯ ಮೇರೆಗೆ ಕಲಾವಿದ ಅನಂತಯ್ಯ ಆಚಾರ್ಯ ಸಿದ್ಧಪಡಿಸಿರುವ ಈ ಗಣಪನಿಗೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ.

– ಅಶ್ವಥ್ ಆಚಾರ್ಯ 

LEAVE A REPLY

Please enter your comment!
Please enter your name here

- Advertisment -

Most Popular

Recent Comments