Saturday, October 1, 2022
Powertv Logo
Homeರಾಜ್ಯಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು

ಶಿವಮೊಗ್ಗ : ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

ತೀರ್ಥಹಳ್ಳಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾದ ಪ್ರಥಮ ಬಿಎ ವಿದ್ಯಾರ್ಥಿ ವರ್ಧನ್ (19) ಹಾಗೂ ಸೊನಲೆಯ ಮಂಜು (22) ಮೃತ ಪಟ್ಟಿರುವ ದುರ್ದೈವಿಗಳು.

ಇಬ್ಬರು ತುಂಗಾ ನದಿಯಲ್ಲಿ ಈಜಲು ಹೋಗಿದ್ದರು, ನಂತರ ಕಾಣೆಯಾಗಿದ್ದಾರೆ.ಬಳಿಕ ಆತಂಕಗೊಂಡ ಪೋಷಕರು ಹುಡುಕಲು ಶುರುಮಾಡಿದಾಗ ನಾಪತ್ತೆಯಾದ ವಿದ್ಯಾರ್ಥಿಗಳ ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದ್ದಾರೆ.

ಪತ್ತೆಯಾದ ಸ್ಥಳದಲ್ಲಿ ಇಬ್ಬರ ಯೂನಿಫಾರ್ಮ್, ಮೊಬೈಲ್ ಸಿಕ್ಕಿದೆ. ಇದೀಗ ಅಗ್ನಿಶಾಮಕ ದಳ, ಸ್ಥಳೀಯರು ಹಾಗೂ ಪೊಲೀಸರ ಸಹಕಾರದೊಂದಿಗೆ ಶವ ಪತ್ತೆಯಾಗಿದೆ.

- Advertisment -

Most Popular

Recent Comments