Friday, October 7, 2022
Powertv Logo
Homeದೇಶಉತ್ತರಪ್ರದೇಶಕ್ಕೆ ಐಸಿಸ್​ ಶಂಕಿತ ಉಗ್ರರ ಎಂಟ್ರಿ

ಉತ್ತರಪ್ರದೇಶಕ್ಕೆ ಐಸಿಸ್​ ಶಂಕಿತ ಉಗ್ರರ ಎಂಟ್ರಿ

ಬಸ್ತಿ : ಶಂಕಿತ ಉಗ್ರರು ಉತ್ತರಪ್ರದೇಶ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಉಗ್ರರ ಪ್ರವೇಶದಿಂದಾಗಿ ಭಾರತ-ನೇಪಾಳ ಗಡಿ ಜಿಲ್ಲೆಗಳಾದ ಮಹಾರಾಜ್​ಗಂಜ್​, ಕುಶಿನಗರ ಹಾಗೂ ಸಿದ್ದಾರ್ಥನಗರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಉಗ್ರರು ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿರುವುದಾಗಿ ಗುಪ್ತಚರ  ಇಲಾಖೆ ವರದಿ ಮಾಡಿದೆ.

ಉತ್ತರ ಪ್ರದೇಶಕ್ಕೆ ಎಂಟ್ರಿ ಕೊಟ್ಟಿರುವ ಅಬ್ದುಲ್​​ ಸಮದ್​ ಹಾಗೂ ಇಲಿಯಾಸ್​ ಎಂಬ ಉಗ್ರರ ಭಾವಚಿತ್ರವನ್ನು ಪೊಲೀಸರು ಎಲ್ಲಾ ಕಡೆ ರವಾನಿಸಿದ್ದಾರೆ. ಈ ಕುರಿತು ಬಸ್ತಿ ವಲಯದ ಐಜಿ ಆಶುತೋಷ್​ ಕುಮಾರ್​ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಬ್ಬರು ಯಾವ ಸಂಘಟನೆಯವರು ಎಂಬ ಖಚಿತ ಮಾಹಿತಿಯಿಲ್ಲ. ಮೂಲಗಳ ಪ್ರಕಾರ ಆ ಇಬ್ಬರು ಐಸಿಸ್​ ಸಂಘಟನೆಯವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಇಬ್ಬರು ಐಸಿಸ್​ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಭಾರತದಲ್ಲಿ ಉಗ್ರತ್ವವನ್ನು ಬೆಳೆಸಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.

8 COMMENTS

  1. I discovered your blog site on google and check a few of your early posts. Continue to keep up the very good operate. I just additional up your RSS feed to my MSN News Reader. Seeking forward to reading more from you later on!…

LEAVE A REPLY

Please enter your comment!
Please enter your name here

- Advertisment -

Most Popular

Recent Comments