ಇಬ್ಬರು ಶಂಕಿತ ಜೈಷ್​ ಉಗ್ರರು ಬಂಧನ

0
159

ಲಖನೌ: ಉತ್ತರ ಪ್ರದೇಶದಲ್ಲಿ ಇಬ್ಬರು ಶಂಕಿತ ಜೈಷ್​-ಇ-ಮೊಹಮ್ಮದ್​ ಉಗ್ರರನ್ನು ಭಯೋತ್ಪಾದನೆ ನಿಗ್ರಹ ದಳದ ಸಿಬ್ಬಂದಿ ಶುಕ್ರವಾರ  ಬಂಧಿಸಿದ್ದಾರೆ. ಇಬ್ಬರೂ ಜಮ್ಮುಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ.

“ಬಂಧಿತರಲ್ಲಿ ಒಬ್ಬ ಶಹ್ನವಾಜ್​ ಅಹ್ಮದ್​ ಜಮ್ಮುಕಾಶ್ಮೀರದ ಕುಲ್ಗಾಂಗೆ ಸೇರಿದವನಾಗಿದ್ದು, ಜೈಷ್​-ಇ-ಮೊಹಮ್ಮದ್​ಗೆ ಯುವಕರನ್ನು ನೇಮಿಸುತ್ತಿದ್ದ. ಈತ ಗ್ರೆನೇಡ್​ ಬಾಂಬ್​ ಎಕ್ಸ್​ಪರ್ಟ್ ಆಗಿದ್ದಾನೆ. ಮತ್ತೊಬ್ಬ ಪುಲ್ವಾಮ ನಿವಾಸಿ ಅಖಿಬ್​ ಅಹ್ಮದ್​ ಮಲಿಕ್”​ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್​ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಶಸ್ತ್ರಾಸ್ತ್ರ ಮತ್ತು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುಲ್ವಾಮ ಉಗ್ರ ದಾಳಿಯ ನಂತರ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

LEAVE A REPLY

Please enter your comment!
Please enter your name here