Home ರಾಜ್ಯ ‘ಚಿಂಚೋಳಿ ಇಬ್ಬರು ಪಿಎಸ್ ಐಗಳು ಅಮಾನತು’

‘ಚಿಂಚೋಳಿ ಇಬ್ಬರು ಪಿಎಸ್ ಐಗಳು ಅಮಾನತು’

ಕಲಬುರಗಿ/ಚಿಂಚೋಳಿ : ಕಲಬುರಗಿ ಜಿಲ್ಲೆ‌ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣದಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಸುಳಿವಿಗಾಗಿ ಯುವಕನೋರ್ವನನ್ನು ವಿಚಾರಣೆಗೊಳಪಡಿಸಿ ತನಿಖೆ ವೇಳೆ ಪೊಲೀಸರಿಂದ ಕಿರುಕುಳ ಆರೋಪದಲ್ಲಿ ಇಬ್ಬರು ಪಿಎಸ್‌ ಐ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಚಿಂಚೋಳಿ ಠಾಣೆ ಪಿಎಸ್‌ಐ ರಾಜಶೇಖರ ರಾಠೋಡ್ ಮತ್ತು ಸುಲೇಪೇಟ ಠಾಣೆ ಪಿಎಸ್‌ಐ ಚೇತನ ಬಿದಿರಿ ಅಮಾನತು ಆದ ಅಧಿಕಾರಿಗಳಾಗಿದ್ದಾರೆ. ಈ ಇಬ್ಬರು ಪೊಲೀಸ್ ಅಧಿಕಾರಿಗಳು ತನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆಂದು ಸಂಘಟನೆಯೊಂದಕ್ಕೆ ದೂರು ನೀಡಿದ್ದ ಯುವಕನೊಬ್ಬ. ನಂತರ ಸಂಘಟನೆಗಳ ಮುಖ್ಯಸ್ಥರು ಯುವಕನಿಗೆ ವಿನಾಕಾರಣ ಕಿರುಕುಳ ಖಂಡಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೀಗ ದೂರಿನ ಅನ್ವಯ ಇಬ್ಬರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ.

ಇನ್ನೂ ಈ ಒಂದು ಪ್ರಕರಣದಲ್ಲಿ ಯಾರೋ ಮಾಡಿದ ತಪ್ಪಿಗೆ ಪೊಲೀಸರ ತಲೆದಂಡ ಸರಿನಾ ಎಂಬ ಪ್ರಶ್ನೇ ಹುಟ್ಟಿಕೊಂಡಿದ್ದು, ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ. ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್‌ಕುಮಾದ ಮೇಲೆ ಸದಸ್ಯ ಆನಂದ ಟೈಗರ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದರು. ನಕಲಿ ಬಿಲ್‌ಗಳಿಗೆ ಸಹಿ ಹಾಕುವಂತೆ ಅಧಿಕಾರಿ ಮೇಲೆ ಆನಂದ್ ಟೈಗರ್ ಒತ್ತಡ ಹಾಕಿದ್ದ ಅಕ್ರಮಕ್ಕೆ ಸಾಥ್ ನೀಡದಿದ್ದಕ್ಕೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದರು ಪುರಸಭೆ ಸದಸ್ಯ ಟೈಗರ್.

ಈ ಒಂದು ಪ್ರಕರಣದ ವಿಚಾರಣೆ ಮಾಡುವ ಸಮಯದಲ್ಲಿ ಸಂಶಯಾಸ್ಪದವಾಗಿ ಒರ್ವ ಯುವಕನನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿ ನಂತರ ಆ ಯುವಕ ಆರೋಪ ಮಾಡಿದ ಬೆನ್ನಲ್ಲೇ ಹಿಂದೆ ಮುಂದೆ ನೊಡದೇ ಹೀಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಸರಿನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಇನ್ನೂ ಮುಖ್ಯವಾಗಿ ಯಾರೋ ಮಾಡಿದ ತಪ್ಪಿಗಾಗಿ ಇನ್ಯಾರೋ ಬಲಿಯಾಗುತ್ತಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಮುತ್ತೋಡಿ ರಕ್ಷಿತಾರಣ್ಯಕ್ಕೆ ನಟ ದರ್ಶನ್ ಭೇಟಿ

ಚಿಕ್ಕಮಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಸಫಾರಿ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ರಕ್ಷಿತಾರಣ್ಯಕ್ಕೆ ನಟ ದರ್ಶನ್ ಭೇಟಿ. ಭದ್ರಾ ರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ ಚಾಲೆಂಜಿಂಗ್ ಸ್ಟಾರ್. ಚಾಲೆಂಜಿಂಗ್ ಸ್ಟಾರ್ ಜೊತೆ ರಕ್ಷಿತಾರಣ್ಯದ...

ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಮಂಕಾದಂತೆ ಕಾಣ್ತಿದೆ ಎನ್ನುವಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. 1 ಲಕ್ಷಕ್ಕೂ ಹೆಚ್ಚು...

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

Recent Comments