Sunday, May 29, 2022
Powertv Logo
Homeದೇಶವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 20 ಲಕ್ಷಕ್ಕೇರಿಕೆ : ಅಮೆರಿಕಾದಲ್ಲೇ ಅತಿ ಹೆಚ್ಚು ಸೋಂಕಿತರು

ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 20 ಲಕ್ಷಕ್ಕೇರಿಕೆ : ಅಮೆರಿಕಾದಲ್ಲೇ ಅತಿ ಹೆಚ್ಚು ಸೋಂಕಿತರು

ನವದೆಹಲಿ: ಡಿಸೆಂಬರ್​ನಿಂದ ಜಗತ್ತಿನಾದ್ಯಂತ ರುದ್ರನರ್ತನವನ್ನಾಡುತ್ತಿರುವ ಹೆಮ್ಮಾರಿ ಕೊರೋನಾ ತನ್ನ ಕದಂಬಬಾಹುವನ್ನು ಚಾಚುತ್ತಲೇ ಇದೆ. ವಿಶ್ವದಾದ್ಯಂತ  ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ 20 ಲಕ್ಷಕ್ಕೇರಿದ್ದು, ಸಾವಿನ ಸಂಖ್ಯೆ 1ಲಕ್ಷದ 34 ಸಾವಿರಕ್ಕೇರಿದೆ. ಅಮೆರಿಕಾದಲ್ಲೇ ಸೋಂಕಿಗೆ 28 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

ಜಗತ್ತಿನಲ್ಲಿ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ  20,83,304 ಆಗಿದ್ದು, ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,34,615ಲಕ್ಷ ದಾಟಿದ್ದು, 5,10,341 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕಿತರ ವರ್ಲ್ಡೋಮೀಟರ್ ಪ್ರಕಾರ ಜಗತ್ತಿನ ಸೋಂಕಿತರ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದ್ದು, ಸೋಂಕಿತರ ಸಂಖ್ಯೆ 6,44,089 ಏರಿಕೆಯಾಗಿದೆ. ಇನ್ನುಳಿದಂತೆ ಸ್ಪೇನ್ ಎರಡನೇ ಸ್ಥಾನದಲ್ಲಿದ್ದು, 1,80,659 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಟಲಿಯಲ್ಲಿ 1,65,155 ಮಂದಿ ಸೋಂಕಿತರು, ಫ್ರಾನ್ಸ್​​ನಲ್ಲಿ 1,47,863, ಜರ್ಮನಿಯಲ್ಲಿ 1,34,753 ಜನರಲ್ಲಿ ಸೋಂಕು ಪತ್ತೆಯಾಗಿದೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments