ತಾಲೀಮು ವೇಳೆ ಯುದ್ಧ ವಿಮಾನಗಳ ಅಪಘಾತ – ಪವಾಡ ಸದೃಶ ರೀತಿಯಲ್ಲಿ ಜಂಪ್ ಮಾಡಿದ್ರು ಪೈಲಟ್ಸ್..!

0
215

ಬೆಂಗಳೂರು : ಏರ್ ಶೋಗೆ ತಾಲೀಮು ನಡೆಸುತ್ತಿದ್ದ ಎರಡು ಯುದ್ಧ ವಿಮಾನಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಪೈಲಟ್​ಗಳು ಪವಾಡ ಸದೃಶ ರೀತಿಯಲ್ಲಿ ಕೆಳಕ್ಕೆ ಧುಮಿಕಿರುವ ಘಟನೆ ಹೆಬ್ಬಾಳ ಬಳಿ ನಡೆದಿದೆ.
ನಾಳೆಯಿಂದ ಏರೋ ಇಂಡಿಯಾ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕಿರಣ ಲಘು ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದವು. ಈ ವೇಳೆ ಅಪಘಾತ ಸಂಭವಿಸಿದೆ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಮನೆ ಬಳಿ ಈ ಘಟನೆ ನಡೆದಿದೆ.
ಎರಡು ಲಘು ಯುದ್ಧ ವಿಮಾನಗಳು ಮುಖಾಮುಖಿಯಾಗಿ ಅಪಘಾತ ಸಂಭವಿಸುವ ಸೂಚನೆ ಸಿಕ್ಕ ಕೂಡಲೇ ಎರಡೂ ವಿಮಾನಗಳ ಪೈಲಟ್​ಗಳು ಸಿನಿಮೀಯ ರೀತಿಯಲ್ಲಿ ಕೆಳಗೆ ಹಾರಿದ್ದಾರೆ. ಒಂದರಲ್ಲಿ ಇಬ್ಬರು, ಮತ್ತೊಂದರಲ್ಲಿ ಒಬ್ಬರು ಪೈಲಟ್ ಇದ್ದರು. 

LEAVE A REPLY

Please enter your comment!
Please enter your name here