ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​ ಜೊತೆ ಸಂಪರ್ಕದಲ್ಲಿದ್ದ ಯುವಕರು ಅರೆಸ್ಟ್​..!

0
297

ಲಖನೌ: ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​ ಜೊತೆ ಸಂಪರ್ಕದಲ್ಲಿರುವ ಇಬ್ಬರು ಕಾಶ್ಮೀರಿ ಯುವಕರನ್ನು ಉತ್ತರಪ್ರದೇಶ ಉಗ್ರ ನಿಗ್ರಹ ಪಡೆ ಬಂಧಿಸಿದೆ. ಜೈಷ್​-ಇ-ಮಹಮ್ಮದ್​ ಜೊತೆ ಸಂಪರ್ಕದಲ್ಲಿದ್ದ ಯುವಕರು ದಾಳಿಗೆ ಪ್ಲಾನ್ ಮಾಡಿಕೊಂಡಿದ್ದರು. ಎನ್​ಕೌಂಟರ್​ನಲ್ಲಿ ಸೇನೆಯ ಗುಂಡಿಗೆ ಬಲಿಯಾದ ಪುಲ್ವಾಮಾ ದಾಳಿಯ ಮಾಸ್ಟರ್​ಮೈಂಡ್ ಅಬ್ದುಲ್​ ರಶೀದ್​ ಗಝಿ ಜೊತೆಗೆ ಸಂಪರ್ಕದಲ್ಲಿದ್ದೆವು ಅಂತ ಯುವಕರು ತಿಳಿಸಿದ್ದಾರೆ.

ಬಂಧಿತ ಯುವಕ ಕುಲ್ಗಾಮ್​ನ ಶಾಹನವಾಜ್​ ಟೆಲಿ ಹಾಗೂ ಅಬ್ದುಲ್​ ಅಖಿಬ್​ ಮಲ್ಲಿಕ್​ ಫೋನ್​ ಕರೆಗಳ ರೆಕಾರ್ಡ್​ನಲ್ಲಿ ಯಾವುದೋ ದೊಡ್ಡ ಕೆಲಸ ಬಗ್ಗೆ ಮಾತನಾಡಿರುವ ಸುಳಿವು ಸಿಕ್ಕಿರುವುದಾಗಿ ತನಿಖೆ ನಡೆಸಿರುವ ಅಧಿಕಾರಿಗಳು ತಿಳಿಸಿದ್ದಾರೆ. ಸಂಭಾಷಣೆಯಲ್ಲಿ ಸಾಮಾನು ಎಂಬ ಪದ ಬಳಸಲಾಗಿದ್ದು, ಯಾವುದೋ ಸ್ಫೋಟಕದ ಕುರಿತು ಮಾತನಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಪಿ ಒ.ಪಿ ಸಿಂಗ್ ಅವರು ಯುವಕರ ವಿಚಾರಣೆ ನಡೆಸಿದ್ದು, ಈ ಸಂದರ್ಭ ಜೆಮ್​ ಜೊತೆ ಲಿಂಕ್​ ಇರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಲ್ಲಿ ಶಹನವಾಜ್ 18 ತಿಂಗಳಿಂದ ಹಾಗೂ ಅಖಿಬ್ 6 ತಿಂಗಳಿನಿಂದ ಜೆಮ್ ಜೊತೆ ಸಂಪರ್ಕದಲ್ಲಿದ್ದ.

LEAVE A REPLY

Please enter your comment!
Please enter your name here