ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಸದ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜೋಯ್ ಬಿಡನ್, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ಗೇಟ್ಸ್, ಟೆಸ್ಲಾ ಸಿಇಒ ಎಲನ್ ಮಸ್ಕ್, ಉದ್ಯಮಿ ವಾರೆನ್ ಬಫೆಟ್, ಆ್ಯಪಲ್, ಊಬರ್ ಹಾಗೂ ಟ್ವಿಟರ್ ಸಂಸ್ಥೆಯ ಟ್ವಿಟ್ಟರ್ ಅಕೌಂಟ್ ಸೇರಿದಂತೆ ಹತ್ತಾರು ಟ್ವಿಟರ್ ಅಕೌಂಟ್ಗಳು ಏಕಕಾಲದಲ್ಲಿ ಹ್ಯಾಕ್ ಆಗಿದೆ ಅಂತ ವರದಿಯಾಗಿದೆ.
ಪ್ರತಿ1 ಸಾವಿರ ಡಾಲರ್ಗೆ , ಅದರ ಡಬಲ್, ಅರ್ಥಾತ್ 2 ಸಾವಿರ ಡಾಲರ್ ನೀಡ್ತೇನೆ. ಹೀಗಾಗಿ ನನ್ನ ಬಿಟ್ ಕಾಯಿನ್ ಅಡ್ರೆಸ್ಗೆ ಹಣ ಜಮೆ ಮಾಡಿ. ಕೇವಲ 30 ನಿಮಿಷ ಮಾತ್ರ ಸಮಯ, ಹಾಗಾಗಿ ಕೂಡಲೇ ಹಣ ಕಳುಹಿಸಿ.. ಎಂಜಾಯ್ ಅಂತ ಈ ಎಲ್ಲಾ ಅಕೌಂಟ್ನಲ್ಲಿ ಟ್ವೀಟ್ ಮಾಡಲಾಗಿದೆ.
ಈ ಬಗ್ಗೆ ಟ್ವಿಟರ್ ಸಂಸ್ಥೆ ಪ್ರತಿಕ್ರಿಯಿಸಿದ್ದು, ‘’ ಭದ್ರತಾ ದೋಷವಾಗಿರೋದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸ್ತಿದ್ದೇವೆ. ಸಮಸ್ಯೆ ಬಗೆಹರಿಸೋ ಪ್ರಯತ್ನದಲ್ಲಿದ್ದೇವೆ. ಈ ಬಗ್ಗೆ ಆದಷ್ಟು ಬೇಗ ಅಪ್ ಡೇಟ್ ನೀಡ್ತೀವಿ. ನಕಲಿ ಟ್ವೀಟನ್ನು ಅನೇಬಲ್ ಮಾಡಿ ಮತ್ತು ಪಾಸ್ವರ್ಡ್ ಚೇಂಜ್ ಮಾಡಿ’’ ಅಂತ ಹೇಳಿದೆ.