ಧಾರವಾಡ : ಏಪ್ರಿಲ್ 9ರಂದು ಧಾರವಾಡದ ನುಗ್ಗಿಕೇರಿಯಲ್ಲಿ ನಡೆದ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿ ದೂರು ಸಲ್ಲಿಸಿದ್ದಾರೆ. ಘಟನೆ ನಡೆದಾಗ ನಮ್ಮ ಮೇಲೆ ದೂರು ಕೊಟ್ಟಿರುವ ನಬಿಸಾಬ್ ಅಲ್ಲಿ ಇರಲೇ ಇಲ್ಲಾ ಎಂದು ಪ್ರಮುಖ ಆರೋಪಿ ಮಹಾನಿಂಗ ಐಗಳಿ ಧಾರವಾಡ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಕಲ್ಲಂಗಡಿ ಖರೀದಿಗೆ ಹೋಗಿದ್ದ ನಮಗೆ ಕಲ್ಲಂಗಡಿ ಮೇಲೆ ಉಗುಳಿ ಕೊಡಲಾಗುತ್ತಿತ್ತು. ಅಲ್ಲದೆ ಕೈಯಲ್ಲಿ ಚೂರಿ ಹಿಡಿದು ನಮ್ಮ ಮೇಲೆ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಲಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಲ್ಲಂಗಡಿ ವ್ಯಾಪಾರಿ ನಬಿಸಾಬ್, ಅಂದು ನಾನೇ ಅಂಗಡಿಯಲ್ಲಿ ಕಲ್ಲಂಗಡಿ ವ್ಯಾಪಾರ ಮಾಡುತ್ತಿದ್ದೆ. ಗುಂಪೊಂದು ತೆಂಗಿನಕಾಯಿ ಒಡೆಯುತ್ತಾ ನನ್ನ ಅಂಗಡಿ ಬಳಿ ಬಂತು. ನೋಡು ನೋಡುತ್ತಿದ್ದಂತೆ ಕಲ್ಲಂಗಡಿ ಹಣ್ಣುಗಳನ್ನ ಪೀಸ್ ಪೀಸ್ ಮಾಡಿದ್ರು. ಆ ವೇಳೆ ನಾನು ಹೆದರಿ ಅಂಗಡಿಯಿಂದ ದೂರ ನಿಂತಿದ್ದೆ. ಕಲ್ಲಂಗಡಿ ಮೇಲೆ ಯಾರು ಉಗುಳುತ್ತಾರೆ ಎಂದು ಪ್ರಶ್ನಿಸಿದ ನಬಿಸಾಬ, ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ರು. ಒಟ್ನಲ್ಲಿ ಹುಬ್ಬಳ್ಳಿ ಗಲಭೆ ಪ್ರಕರಣ ಸುದ್ದಿಯಾಗುತ್ತಿದ್ದಂತೆ, ತಣ್ಣಗಾಗಿದ್ದ ನುಗ್ಗಿಕೇರಿ ಕಲ್ಲಂಗಡಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.