ಬೆಂಗಳೂರು: ಡಿವೈಎಸ್ ಲಕ್ಷ್ಮೀ ಅನುಮಾನಾಸ್ಪದ ಸಾವು ಪ್ರತಿದಿನ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಲಕ್ಷ್ಮೀ ಮದ್ಯಪಾನಕ್ಕೆ ಅಡಿಕ್ಟ್ ಆಗಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಲಕ್ಷ್ಮೀ ಇತ್ತೀಚೆಗೆ ಪಾರ್ಟಿಗಳಲ್ಲಿ ಹೆಚ್ಚು ಮದ್ಯ ಸೇವಿಸಿದ್ದರು ಎನ್ನುವ ಮಾಹಿತಿ ಪೊಲೀಸ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕಳೆದ ಅಗಷ್ಟ್ ತಿಂಗಳಿನಲ್ಲಿ ಬೆಳಗಾವಿಯ ಖಾನಾಪುರ ಪೊಲೀಸ್ ತರಬೇತಿ ಶಾಲೆಯಲ್ಲಿ ಲಕ್ಷ್ಮೀ ಇಲಾಖೆಯ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಲಕ್ಷ್ಮೀ ಟ್ರೈನಿಂಗ್ ಕ್ಯಾಂಪನ್ ನಲ್ಲಿ ಮದ್ಯ ಸೇವಿಸಿ ಇತರ ಪೊಲೀಸ್ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಅಲ್ಲದೇ ಕ್ಯಾಂಪ್ ನಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮದ್ಯ ಸೇವಿಸಿ ಪೊಲೀಸ್ ಇಳಾಖೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಪೊಲೀಸ್ ತರಬೇತಿ ಶಾಲೆಯ ಪ್ರಾಶುಂಪಾಲರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.
ಸದ್ಯ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಲಕ್ಷ್ಮೀ ಅವರಿಗೆ ಮದ್ಯಪಾನ ಸೇವನೆಯ ಅಭ್ಯಾಸ ಎಲ್ಲಾ ಹಂತಗಳಲ್ಲೂ ಮುಳುವಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಸಿಐಡಿಯಿಂದ ಬೇರೆ ಕಡಗೆ ಪೋಸ್ಟಿಂಗ್ ಸಿಗದೇ ಇರುವುದಕ್ಕೆ ಇದೇ ಕಾರಣ ಎನ್ನುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಲಕ್ಷ್ಮೀ ಅನುಮಾನಾಸ್ಪದ ಸಾವಿಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.