ಟಿವಿ ನೋಡೋರಿಗೆ, ಪೇಪರ್​ ಓದೋರಿಗೆ ತಲೆ ಸರಿಯಿಲ್ಲ : ಅನಂತ್​ಕುಮಾರ್ ಹೆಗಡೆ

0
306

ಕಾರವಾರ : ‘ನಿಮ್ಮ ತಲೆಸರಿ ಇರಬೇಕು ಅಂದ್ರೆ ನೀವು ಟಿ.ವಿ ನೋಡುವುದನ್ನು, ಪೇಪರ್ ಓದುವುದನ್ನು ನಿಲ್ಲಿಸಿ. ಟಿ.ವಿ ನೋಡುವವರು ತಲೆ ಸರಿ ಇಲ್ಲದವರು ಅಂತ ಕೇಂದ್ರಸಚಿವ ಅನಂತ್​ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಂಕೋಲಾದ ಅಲಗೇರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಟಿವಿ ಅವರು, ಪತ್ರಿಕೆಯವರು ನಮಗೆ ಯಾವ್ದೇ ರೀತಿ ಪ್ರಚಾರ ನೀಡಲ್ಲ. ಅವರು ಏನೇ ಹೇಳಿದ್ರೂ ಅದನ್ನು ನಂಬಬೇಡಿ. ಟಿವಿ ನೋಡೋರು, ಪೇಪರ್ ಓದೋರು ತಲೆ ಸರಿ ಇಲ್ಲದವ್ರು. ಅದಕ್ಕಾಗಿ ನಾನು ಕಳೆದ 10 ವರ್ಷಗಳಿಂದ ಟಿವಿ ನೋಡೋದನ್ನು, ಪೇಪರ್ ಓದೋದನ್ನು ನಿಲ್ಲಿಸಿದ್ದೇನೆ. ಅದಕ್ಕೆ ನಂಗೆ ತಲೆ ಸರಿ ಇದೆ. ನಿಮಗೆ ಡಯಾಬಿಟಿಸ್​ ಬರಬಾರದು ಅಂತಾದ್ರೆ ಮಾಧ್ಯಮಗಳಿಂದ ದೂರ ಇರಿ’ ಅಂತ ಹೇಳಿದ್ದಾರೆ.

LEAVE A REPLY

Please enter your comment!
Please enter your name here