Home P.Special ಹಣ್ಣಿನ ಬೀಜ ಸಂಗ್ರಹಿಸಿ ಕಾಡಿನಲ್ಲಿ ಬಿತ್ತುವ ಪರಿಸರ ಪ್ರೇಮಿ ವೃದ್ಧ ದಂಪತಿ..!

ಹಣ್ಣಿನ ಬೀಜ ಸಂಗ್ರಹಿಸಿ ಕಾಡಿನಲ್ಲಿ ಬಿತ್ತುವ ಪರಿಸರ ಪ್ರೇಮಿ ವೃದ್ಧ ದಂಪತಿ..!

ತುಮಕೂರು :  ನಾವೆಲ್ಲ ತಿಂದು ಬಿಸಾಕಿದ ಹಣ್ಣಿನ ಬೀಜಗಳು ವ್ಯರ್ಥವಾಗಿ ಗೊಬ್ಬರವಾಗುತ್ತವೆ. ಆದರೆ ಅದೇ ಬೀಜಗಳನ್ನ ಸಂರಕ್ಷಿಸಿ ಬೀಜದ ಉಂಡೆಗಳನ್ನ ತಯಾರು ಮಾಡಿದ್ರೆ ಒಂದು ಕಾಡನ್ನೂ ನಿರ್ಮಾಣ ಮಾಡಬಹುದು ಎಂಬುದನ್ನ ತುಮಕೂರಿನ ವೃದ್ಧ ದಂಪತಿ ಸಾಧಿಸಿ ತೋರಿಸುತ್ತಿದ್ದಾರೆ.

ಬೇಲ, ಪನ್ನೇರಲೆ, ಸೀತಾಫಲ, ಸೀಬೆ, ಹಲಸು, ಕಿತ್ತಲೆ ಬೀಜಗಳ ಸಂಗ್ರಹ ಮಾಡಿ 300ಕ್ಕೂ ಹೆಚ್ಚು ಬೀಜದ ಉಂಡೆಗಳನ್ನು ದೇವರಾಯನ ದುರ್ಗದ ಕಾಡಿನಲ್ಲಿ ಬಿತ್ತನೆ ಮಾಡುವ ಕಾಯಕವನ್ನ ತುಮಕೂರಿನ ಡಿ.ಎಸ್.ಪಂಡಿತ್ ಆರಾಧ್ಯ‌ ಹಾಗೂ ಭ್ರಮರಾಂಭ ದಂಪತಿ ಮಾಡುತ್ತಾ ಬಂದಿದ್ದಾರೆ.

ಕಳೆದ ಎರಡು ವರ್ಷದಿಂದ ಸುಮಾರು 800 ಕ್ಕೂ ಹೆಚ್ಚು ಮಣ್ಣಿನ ಬೀಜಗಳನ್ನ ಮಳೆ ಬಿದ್ದು ಭೂಮಿ ಹಸಿಯಾದ ಸಂದರ್ಭದಲ್ಲಿ ಇಬ್ಬರೂ ಹೋಗಿ ಕಾಡಿನ ನಡು ನಡುವೆ ಎಸೆಯುತ್ತಾ ಬರುತ್ತಿದ್ದಾರೆ. ಮಳೆಗಾಲದ ಮುನ್ನಶೇಖರಿಸಿದ ವಿವಿಧ ಹಣ್ಣಿನ ಬೀಜಗಳಿಗೆ ಮಣ್ಣಿನ ಉಂಡೆ ಮಾಡಿ, ಅದನ್ನು ಬಿಸಿಲಿನಲ್ಲಿ ಸ್ವಲ್ಪ ಒಣಗಿಸಿ ಸುಮಾರು 300 ಬೀಜದ ಉಂಡೆಗಳಾದ ನಂತರ ಅವನ್ನ ಕಾಡಿನ ನಡುವೆ ಬಿತ್ತನೆ ಮಾಡುವ ಕೆಲಸ ಮಾಡುತ್ತಿದ್ದಾರೆ.

ತುಮಕೂರು ನಗರದ ಸರಸ್ವತಿ ಪುರಂ ನಿವಾಸಿಯಾಗಿರುವ ಆರಾಧ್ಯ ದಂಪತಿ ತಮ್ಮ ವಯಸ್ಸಿನವರಿಗೆ ಕೊರೋನಾ ಭೀತಿ ಇದೆ ಎಂದು ತಿಳಿದಿದ್ರೂ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ, ಪರಿಸರದ ಬಗ್ಗೆ ತೋರಿಸುತ್ತಿರುವ ಪ್ರೀತಿಗೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ…

-ಹೇಮಂತ್ ಕುಮಾರ್. ಜೆ.ಎಸ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments