ದಾಳಿ ವೇಳೆ ಪುಲ್ವಾಮಾದಲ್ಲೇ ಇದ್ದ ತುಮಕೂರು ಯೋಧ ಹೇಳಿದ್ದೇನು?

0
336

ತುಮಕೂರು: ನಾವೆಲ್ಲಾ ಸೈನಿಕರು ಹುಟ್ಟಿರೋದೆ ಹೋರಾಡೋಕೆ. ಯುದ್ಧ ಮಾಡೋದೇ ಒಬ್ಬ ಸೈನಿಕನ ಧರ್ಮ ಅಂತ ತುಮಕೂರಿನ ಯೋಧ ಸಾಧಿಕ್ ಹೇಳಿದ್ದಾರೆ.

ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರದಾಳಿ ನಡೆದ ಸಂದರ್ಭ ಘಟನಾ ಸ್ಥಳದ ಬಳಿಯೇ ಇದ್ದ ತುಮಕೂರಿನ ಯೋಧ ಸಾಧಿಕ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ, “ನಾನು ಘಟನಾ ಸ್ಥಳದಿಂದ 15 ಕಿಮೀ ದೂರದಲ್ಲಿದ್ದೆ. ದಾಳಿ ನಡೆದ ತಕ್ಷಣ ಸ್ಥಳಕ್ಕೆ‌ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಘಟನೆ ಘನ ಘೋರವಾಗಿತ್ತು. ಇದೆಲ್ಲಾ ಹೇಗಾಯ್ತು ಅಂತಾ ಹೇಳೋಕೆ ಆಗೋದಿಲ್ಲ. ಘಟನೆಯಿಂದ ಇಡೀ ದೇಶಕ್ಕೆ ತುಂಬಾ ನಷ್ಟವಾಗಿದೆ” ಅಂತ ಹೆಳಿದ್ದಾರೆ.

“ಇಂಡಿಯನ್ ಆರ್ಮಿ ಯಾವತ್ತೂ ಕೈಕಟ್ಟಿ ಕುಳಿತಿಲ್ಲ, ಕುಳಿತುಕೊಳ್ಳುವುದೂ ಇಲ್ಲ. ಉಗ್ರರ ಹತ್ಯೆಗೆ ಹಿಂದೆಯೂ ಸೇನೆ ಕೆಲಸ ಮಾಡಿದೆ. ಈಗಲೂ ಮಾಡ್ತಾ ಇದೆ. ಮುಂದೇನೂ ಮಾಡುತ್ತೆ. ನಮ್ಮಿಂದ ಬೆಸ್ಟ್ ಅನ್ನುವ ರೀತಿಯಲ್ಲಿ ಅವರಿಗೆ ಉತ್ತರ ನೀಡ್ತೇವೆ. ಇವತ್ತು ಕೂಡ ಉತ್ತರ ನೀಡಿದ್ದೇವೆ. ದಾಳಿಯ ಮಾಸ್ಟರ್ ಮೈಂಡ್ ಹತ್ಯೆ ಮಾಡಲಾಗಿದೆ. ಮುಂದೆಯು ಕಾರ್ಯಾಚರಣೆ ನಡೆಸ್ತೇವೆ. ಇವತ್ತಿನ ಘಟನೆಯಲ್ಲೂ ನಮಗೆ ಲಾಸ್ ಆಗಿದೆ.‌‌ ನಮ್ಮ ಐದು ಜನ ಸೈನಿಕರನ್ನ ಕಳೆದುಕೊಂಡಿದ್ದೇವೆ” ಅಂತ ಸಾಧಿಕ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here