Home ಪವರ್ ಪಾಲಿಟಿಕ್ಸ್ ಪರಂ ವಿರುದ್ಧ ಕಾರ್ಯಕರ್ತರು ಗರಂ..!

ಪರಂ ವಿರುದ್ಧ ಕಾರ್ಯಕರ್ತರು ಗರಂ..!

ತುಮಕೂರು : ಪರಮೇಶ್ವರ್ ಹಠಾವೋ, ಕಾಂಗ್ರೆಸ್​ ಬಚಾವೋ ಅಂತ ತುಮಕೂರಿನಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್​ಗಳನ್ನು ಅಂಟಿಸಿದ್ದು, ಪರಂ ಫುಲ್ ಗರಂ ಆಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆಬೀರಿದೆ. ಕಾಂಗ್ರೆಸ್​ ಕೇವಲ ಬೆಂಗಳೂರು ಗ್ರಾಮಾಂತರದಲ್ಲಿ (ಡಿ.ಕೆ ಸುರೇಶ್​​) ಗೆದ್ದಿದ್ದರೆ, ಜೆಡಿಎಸ್​ ಹಾಸನದಲ್ಲಿ (ಪ್ರಜ್ವಲ್​ ರೇವಣ್ಣ) ಮಾತ್ರ ಜಯಭೇರಿ ಬಾರಿಸಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಶ್ ಅವರಿಗೆ ವಿಜಯ ಲಕ್ಷ್ಮಿ ಒಲಿದಿದ್ದಾಳೆ.
ಇನ್ನು ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿಯ ಜಿ.ಎಸ್​ ಬಸವರಾಜ್​ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಕಾಂಗ್ರೆಸ್​ನ ಸಂಸದರಿಗೇ ಟಿಕೆಟ್ ನೀಡದೆ ಮೈತ್ರಿ ಧರ್ಮದ ಹೆಸರಲ್ಲಿ ದೇವೇಗೌಡರಿಗೆ ಟಿಕೆಟ್​ ನೀಡಿದ್ದು, ಸ್ಥಳೀಯ ‘ಕೈ’ ನಾಯಕರಿಗೆ ಮಾತ್ರವಲ್ಲದೆ ಅನೇಕ ಕಾರ್ಯಕರ್ತರಿಗೆ ಅಸಮಾಧಾನ ತಂದಿತ್ತು.
ಇದೀಗ ಮೈತ್ರಿ ಅಭ್ಯರ್ಥಿ ದೇವೇಗೌಡರು ಸೋಲನುಭವಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ದೇವೇಗೌಡರನ್ನು ತುಮಕೂರಿಗೆ ಕರೆತಂದಿದ್ದಕ್ಕೆ ‘ಕೈ’ಯ ಕೆಲವು ನೊಂದ ಕಾರ್ಯಕರ್ತರು ಪರಮೇಶ್ವರ್ ಅವರ ವಿರುದ್ಧ ಪೋಸ್ಟರ್​ಗಳನ್ನು ಅಂಟಿಸೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ರಾತ್ರಿಯಿಂದ ತುಮಕೂರಿನಲ್ಲಿ ‘ಪರಮೇಶ್ವರ್ ಹಠಾವೋ, ಕಾಂಗ್ರೆಸ್ ಬಚಾವೋ’ ಅನ್ನೋ ಪೋಸ್ಟರ್ ರಾರಾಜಿಸುತ್ತಿದ್ದು, ಪರಂ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಜಿಲ್ಲಾ ಕಾಂಗ್ರೆಸ್​​ ವಿರುದ್ಧ ಪರಮೇಶ್ವರ್ ಕೆಂಡಾಮಂಡಲರಾಗಿದ್ದು, ಜಿಲ್ಲಾ ಕಾಂಗ್ರೆಸ್​ ಕಾರ್ಯಕರ್ತರಿಂದ ಆ ಪೋಸ್ಟರ್​ಗಳನ್ನು ತೆಗೆಸಿ ಡಿಸಿಎಂಗೆ ಆದ ಮುಜುಗರವನ್ನು ತಪ್ಪಿಸಲು ಮುಂದಾಗಿದೆ.
ಬಿತ್ತಿಪತ್ರ ಅಂಟಿಸಿದವರ ವಿರುದ್ಧ ಕಾಂಗ್ರೆಸ್​ ಕ್ರಮಗಳೊಳ್ಳಲು ಮುಂದಾಗಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಪೊಲೀಸರಿಗೆ ದೂರು ನೀಡೋ ಸಾಧ್ಯತೆ ಕೂಡ ಇದೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments