Monday, May 23, 2022
Powertv Logo
HomePower Specialತುಳಸಿ ಸೇವನೆಯಿಂದ ಆಗುವ ಪ್ರಯೋಜನೆಗಳು

ತುಳಸಿ ಸೇವನೆಯಿಂದ ಆಗುವ ಪ್ರಯೋಜನೆಗಳು

ಭಾರತದಲ್ಲಿ ಓಮೈಕ್ರಾನ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದನ್ನು ತಡೆಯಲು ಎಲ್ಲರೂ ದಾರಿ ಹುಡುಕುತ್ತಿದ್ದಾರೆ. ನೀವೂ ಇಂದಿನಿಂದ ಮನೆಯಲ್ಲಿಯೇ ಈ ಮನೆಮದ್ದುಗಳನ್ನು ಪ್ರಯತ್ನಿಸಲು ಪ್ರಾರಂಭಿಸಿದರೆ, ಓಮಿಕ್ರಾನ್ ಅಪಾಯವನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ನಮ್ಮೆಲ್ಲರ ಮನೆಯಲ್ಲಿ ಈ ಸಸ್ಯವನ್ನ ಬೆಳಸೇ ಬೆಳಸುತ್ತೀವಿ, ಇದನ್ನು ಪ್ರತಿದಿನ ಸೇವಿಸುವುದರಿಂದ, ಓಮೈಕ್ರಾನ್ ಅಪಾಯವನ್ನು ತಪ್ಪಿಸಬಹುದು. ಯಾವುದು ಆ ಸಸ್ಯ ಗಿಡ ಅಂತೀರಾ..? ಅದುವೇ ಔಷಧೀಯ ಗುಣಗಳಿಂದ ಕೂಡಿದ ತುಳಸಿ.

ಚಳಿಗಾಲದಲ್ಲಿ ತುಳಸಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯ ಪರಿಣಾಮ ಬೀರುತ್ತದೆ. ತುಳಸಿಯು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ನಿಜ ಹೇಳಬೇಕೆಂದರೆ ಚಳಿಗಾಲದಲ್ಲಿ ನಮ್ಮ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ತುಳಸಿ ಸೇವನೆಯಿಂದ ಶೀತ-ಕೆಮ್ಮು ಮತ್ತು ಶೀತದಂತಹ ಚಳಿಗಾಲದ ಕಾಯಿಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಬಹುದು. ತುಳಸಿ ಎಲೆಯಲ್ಲಿ ಜೀವಸತ್ವಗಳು ಮತ್ತು ಖನಿಜಗಳಿವೆ. ವಿಟಮಿನ್ ಸಿ, ಕ್ಯಾಲ್ಸಿಯಂ, ಸತು ಮತ್ತು ಕಬ್ಬಿಣ ಅಂಶವಿದೆ.

ತುಳಸಿ ಉತ್ತಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗುತ್ತದೆ. ಇದು ಆಯುರ್ವೇದದ ಮುಖ್ಯ ಔಷಧಿ ಎಂದೇ ಪರಿಗಣಿಸಲಾಗಿದೆ. ತುಳಸಿ ಎಲೆಗಳಿಂದ ತುಳಸಿ ಚಹಾ, ಕಷಾಯವನ್ನ ಮಾಡಿ ಸೇವನೆ ಮಾಡಬಹುದು ಇದನ್ನ ಬೆಳಗ್ಗೆ ಎದ್ದು ಹಾಗೆ ತಿಂದರು ಆರೋಗ್ಯಕ್ಕೆ ಇನ್ನು ಒಳ್ಳೆಯದು. ಕರೋನಾ ಅವಧಿಯಲ್ಲಿ ಪ್ರತಿದಿನ 5-6 ತುಳಸಿ ಎಲೆಗಳನ್ನು ಸೇವಿಸುವುದು ತುಂಬಾ ಪರಿಣಾಮಕಾರಿ ಎಂದು ಆಯುಷ್ ಸಚಿವಾಲಯವು ಹೇಳಿತ್ತು. ಇಷ್ಟೆಲ್ಲಾ ಗುಣಗಳಿಂದ ಕೂಡಿದ ತುಳಸಿಯ ಸೇವನೆಯು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.

ತುಳಸಿಗೆ ಭಾರತೀಯ ಆಯುರ್ವೇದ ಆರೋಗ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ರೋಗ ನಿರೋಧಕ ಶಕ್ತಿಯನ್ನು ಯಥೇಚ್ಛವಾಗಿ ತುಳಸಿ ಹೊಂದಿದೆ. ಈ ತುಳಸಿ ಪರಿಪೂರ್ಣ ಮನೆಮದ್ದಾಗಿದೆ. ಶೀತ, ನೆಗಡಿ, ಕೆಮ್ಮಿನಂತಹ ಕಾಯಿಲೆಗಳಿಗೆ ತುಳಸಿ ರಾಮಬಾಣವಾಗಿದೆ. ಭಾರತೀಯರು ತುಳಸಿಯನ್ನು ದೇವರಾಗಿ ಪೂಜೆ ಮಾಡುತ್ತಾರೆ. ತುಳಸಿ ಸೇವನೆಯಿಂದ ದೇಹಕ್ಕೆ ಸಾಕಷ್ಟು ಲಾಭಗಳೂ ಇವೆ. ಆ್ಯಂಟಿ ಬಯೋಟಿಕ್,  ಆ್ಯಂಟಿ ಫಂಗಲ್,  ಆ್ಯಂಟಿ ವೈರಲ್ ಗುಣಗಳನ್ನು ಹೊಂದಿರೋದ್ರಿಂದ ಸೋಂಕುಗಳ ವಿರುದ್ಧ ಹೋರಾಡಲು ತುಳಸಿ ಸಹಾಯ ಮಾಡಿ ದೇಹವನ್ನ ಆರೋಗ್ಯವಾಗಿ ಇಡಲು ಸಹಕಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಅನ್ನೋದು ಸಹಜವಾಗಿ ಬಿಟ್ಟಿದೆ ಚಿಕ್ಕ ಮಕ್ಕಳಿಂದ ಹಿಡಿದ ವಯೋರುದ್ಧರವರೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ತುಳಸಿಯನ್ನ ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಸ್ಥಿರವಾಗಿರುವಂತೆ ಮಾಡುತ್ತದೆ. ತುಳಸಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ದಿನವಿಡೀ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.

ತುಳಸಿಯನ್ನ ಸೇವನೆ ಮಾಡೋದ್ರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಅಲ್ಲದೆ ದೇಹದಲ್ಲಿ ಉರಿಯೂತ ಇದ್ದರೆ ಕಡಿಮೆ ಮಾಡುತ್ತದೆ. ಗರ್ಭಿಣಿ ಮಹಿಳೆಯರಲ್ಲಿ  ವಾಂತಿಯ ಸಮಸ್ಯೆ ಕಾಣೋದು ಕಾಮನ್​​​ ಅಂತವರು ತುಳಸಿ ಎಲೆಯನ್ನ ಜಗಿಯೋದ್ರಿಂದ ವಾಂತಿಯ ಸಮಸ್ಯೆ ಕಡಿಮೆಯಾಗುತ್ತದೆ ಎಂದು ತಜ್ಞರ ಹೇಳುತ್ತಾರೆ.

ತುಳಸಿ ಎಲೆಗಳ ಸೇವನೆಯಿಂದ ಬಾಯಿಯ ದುರ್ವಾಸನೆಯನ್ನು ತೆಗೆದುಹಾಕುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.  ತುಳಸಿಯು ನೈಸರ್ಗಿಕವಾಗಿರುವುದರಿಂದ, ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಕೆಲವೊಮ್ಮೆ ಮನೆಯಲ್ಲಿ ಕೆಲಸ ಮಾಡುವಾಗ ಸಣ್ಣಪುಟ್ಟ ಗಾಯಗಳು ಆಗೋದು ಸಹಜ ಅಂತವರು ಈ ತುಳಸಿ ರಸವನ್ನ ಗಾಯಕ್ಕೆ ಹಚ್ಚಿದರೆ ಬೇಗನೆ ಗುಣವಾಗುತ್ತದೆ. ತುಳಸಿ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿದ್ದು ಗಾಯವನ್ನ ಹಣ್ಣಾಗಲು ಬಿಡುವುದಿಲ್ಲ.

- Advertisment -

Most Popular

Recent Comments