Home ದೇಶ-ವಿದೇಶ ಭಾರತದ ವಿರುದ್ಧ ಪ್ರತಿಕಾರದ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಭಾರತದ ವಿರುದ್ಧ ಪ್ರತಿಕಾರದ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್:  ಪ್ರಧಾನಿ ನರೇಂದ್ರ ಮೋದಿಯ ಆಪ್ತ  ಗೆಳೆಯ  ಅಮೆರಿಕಾ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಈಗ ಭಾರತದ ವಿರುದ್ಧ ಪ್ರತಿಕಾರ ತೆಗೆದುಕೊಳ್ಳುವ ಮಾತನಾಡಿದ್ದಾರೆ.

ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಬಿಗಾಡಾಯಿಸುತ್ತಲೇ ಇದೆ. ಹಾಗಾಗಿ ಅದರ ಚಿಕಿತ್ಸೆಗಾಗಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ  ನಿಷೇಧವನ್ನು ಹಿಂಪಡೆಯಬೇಕು. ಇಲ್ಲವಾದರೆ ಭಾರತದ ಮೇಲೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.  ಈ ಬಗ್ಗೆ ನಾನು ಈಗಾಗಲೇ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಈ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಅಮೆರಿಕಾದ ಈಗಿನ ಪರಿಸ್ಥಿತಿಗೆ ಅವಶ್ಯಕವಾಗಿದ್ದು, ಅದನ್ನು ರಫ್ತು ಮಾಡಲೇಬೇಕು ಎಂದು ಟ್ರಂಪ್ ಪಟ್ಟು ಹಿಡಿದಿದ್ದಾರೆ. ನಮಗೆ ಬರಬೇಕಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಕಳಿಸಿಕೊಟ್ರೆ ಅದನ್ನು ನಾವು ಸ್ವಾಗತಿಸುತ್ತೇವೆ. ಒಂದು ವೇಳೆ ರಫ್ತನ್ನು ತಡೆದರೆ ಅದಕ್ಕೆ ಪ್ರತಿಕಾರವನ್ನು  ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

ಶಿವಮೊಗ್ಗದಲ್ಲಿಯೂ ಲಾಕ್ ಡೌನ್ ಗೆ ಚಿಂತನೆ – ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಇನ್ನು ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಲಾಕ್ ಡೌನ್ ಮಾಡುವ ಬಗ್ಗೆ ಕೂಗು ಕೇಳಿ ಬರುತ್ತಿದೆ. ಸಾರ್ವಜನಿಕರಿಂದಲೇ, ಲಾಕ್ ಡೌನ್ ಮಾಡಿದರೆ ಒಳ್ಳೆಯದಪ್ಪಾ ಎಂಬ ಪ್ರತಿಕ್ರಿಯೇ ಕೇಳಿ ಬರ್ತಿದೆ. ಬೆಂಗಳೂರು...

ಚಾಮುಂಡಿ ವರ್ಧಂತಿ ಉತ್ಸವ…ಯದುವೀರ್ ದಂಪತಿ ಭಾಗಿ…

ಮೈಸೂರು : ಇಂದು ನಾಡದೇವಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಅಧಿದೇವತೆಯ ಉತ್ಸವ ನೆರವೇರಿತು.ಕೊರೊನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದಿನ ಆಚರಣೆ ಕೇವಲ...

ಸ್ಮಶಾನದಲ್ಲಿ ಶವ ಸಂಸ್ಕಾರ | ಸ್ಮಶಾನವನ್ನೇ ಸೀಲ್ ಡೌನ್ ಮಾಡಿದ ಬಡಾವಣೆ ಜನತೆ

ವಿಜಯಪುರ : ಕೊರೋನಾದಿಂದ ಮೃತರಾದ ದೇಹವನ್ನು ಹೂತು ಹಾಕಿದ್ದಾರೆ ಎಂದು ಸ್ಮಶಾನದ ಸುತ್ತಮುತ್ತಲಿನ ನಿವಾಸಿಗಳು ಸ್ಮಶಾನವನ್ನೇ ಸೀಲ್ ಡೌನ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಾಲುಕ್ಯ ನಗರದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ...

ಬೆಂಗಳೂರು ಖಾಲಿ ಮಾಡಿ ಊರುಗಳತ್ತ ಪ್ರಯಾಣ ಬೆಳೆಸಿದ ಜನ..!

ಬೆಂಗಳೂರು :  ದಿನೇದಿನೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ರಾತ್ರಿ 8ರಿಂದ ಲಾಕ್​ಡೌನ್ ಜಾರಿಮಾಡಲಾಗಿದೆ. ಇನ್ನು ಇಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಎಂದು  ಹೆದರಿದ ಜನ ಸಾಗರೋಪಾದಿಯಲ್ಲಿ ಸ್ವಗ್ರಾಮಗಳತ್ತ ಹೊರಟಿದ್ದಾರೆ....

Recent Comments