Home ಸಿನಿ ಪವರ್ ಹೇಗಿದೆ ಗೊತ್ತಾ ಜೂನಿಯರ್ ಕ್ರೇಜಿಸ್ಟಾರ್ ಎಂಟ್ರಿ..?

ಹೇಗಿದೆ ಗೊತ್ತಾ ಜೂನಿಯರ್ ಕ್ರೇಜಿಸ್ಟಾರ್ ಎಂಟ್ರಿ..?

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ವಿಕ್ರಮ್ `ತ್ರಿವಿಕ್ರಮ’ನಾಗಿ ಸ್ಯಾಂಡಲ್​​ವುಡ್​ಗೆ ಎಂಟ್ರಿಕೊಡ್ತಿದ್ದಾರೆ. ಕೊರೋನಾ ಹಾವಳಿ ಇಲ್ದೆ ಇದ್ದಿದ್ರೆ ಇಷ್ಟೊತ್ತಿಗೆ ಜೂನಿಯರ್ ರವಿಚಂದ್ರನ್ ಸಿಲ್ವರ್​ ಸ್ಕ್ರೀನ್​​ನಲ್ಲಿ ಸದ್ದು ಮಾಡ್ತಿದ್ರು. ಕೊರೋನಾದಿಂದಾಗಿ ವಿಕ್ಕಿ ಎಂಟ್ರಿ ತಡವಾಗಿದೆ.

ಈಗಾಗಲೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಅಲ್ಲದೆ ವಿಕ್ರಮ್ ಮಾಸ್ ಹೀರೋ ಆಗಿ ಸ್ಯಾಂಡಲ್​ವುಡ್​ನಲ್ಲಿ ಸೌಂಡು ಮಾಡೋ ಭರವಸೆಯೂ ಮೂಡಿದೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಮಸ್ತ್​ ಟೀಸರ್​ ಬಿಡುಗಡೆಯಾಗಿದ್ದು, ಎಲ್ಲಾ ನಿರೀಕ್ಷೆ, ಭರವಸೆಗಳನ್ನು ಮತ್ತಷ್ಟು ಹೆಚ್ಚಿಸಿದೆ. 

ಹೌದು, ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ `ತ್ರಿವಿಕ್ರಮ’ ಟೀಸರ್ ಬಿಡುಗಡೆಯಾಗಿದೆ. ಹುಟ್ಟುಹಬ್ಬದ ದಿನ ವಿಕ್ರಮ್ `ತ್ರಿವಿಕ್ರಮ’ನಾಗಿ ಮಾಸ್ ಎಂಟ್ರಿಕೊಟ್ಟಿದ್ದಾರೆ. ಬೈಕ್ ಸ್ಟಂಟ್, ಆ್ಯಕ್ಷನ್ ಮೂಲಕ ವಿಕ್ಕಿ ಗಮನಸೆಳೆದಿದ್ದಾರೆ.

ತ್ರಿವಿಕ್ರಮ್ ಗೆ ರೋಜ್, ಮಾಸ್​ ಲೀಡರ್ ಖ್ಯಾತಿಯ ಸಹಾನ ಮೂರ್ತಿ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಗೌರಿ ಎಂಟರ್​ಟೈನ್ಮೆಂಟ್​ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, ಸೋಮಣ್ಣ ಬಂಡವಾಳ ಹಾಕಿದ್ದಾರೆ. `ಸಂತೂರ್ ಮಮ್ಮಿ’ ಖ್ಯಾತಿಯ ಆಕಾಂಕ್ಷ ಶರ್ಮಾ ಅಭಿನಯಿಸಿದ್ದಾರೆ. 

 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments