ನೈಸ್ ರಸ್ತೆಯಲ್ಲಿ ರೌಡಿಗಳ ಜೊತೆ ಸೆಣೆಸಿದ ರವಿಚಂದ್ರನ್ ಪುತ್ರ!

0
352

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ತ್ರಿವಿಕ್ರಮ್ ಬೆಂಗಳೂರಿನ ನೈಸ್​ ರಸ್ತೆಯಲ್ಲಿ ರೌಡಿಗಳ ಜೊತೆ ಫೈಟ್ ಮಾಡಿದ್ದಾರೆ. ತನ್ನ ತಂಟೆಗೆ ಬಂದ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ. ಅರೆ, ಏನಿದು? ಯಾವ ಗಲಾಟೆ? ಯಾರು ಅಟ್ಯಾಕ್ ಮಾಡಿದ್ದು? ಏನಾಯ್ತು ಅಂತ ಕೇಳ್ತಿದ್ದೀರಾ? ಇದು ರಿಯಲ್ ಅಲ್ಲ… ರೀಲ್ ಹಿಂದಿನ ಕಹಾನಿ. 

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ತ್ರಿವಿಕ್ರಮ್ ಗೌರಿ ಎಂಟರ್​ಟ್ರೈನರ್ ಬ್ಯಾನರ್ ಅಡಿಯಲ್ಲಿ ಸೋಮಣ್ಣ ನಿರ್ಮಿಸುತ್ತಿರೋ, ಸಹಾನ ಮೂರ್ತಿ ಆ್ಯಕ್ಷನ್ ಕಟ್ ಹೇಳುತ್ತಿರೋ ‘ತ್ರಿವಿಕ್ರಮ್’ ಎಂಬ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನೈಸ್ ರಸ್ತೆಯಲ್ಲಿ ಸಿನಿಮಾದ ಫೈಟಿಂಗ್ ದೃಶ್ಯದ ಚಿತ್ರೀಕರಣ ನಡೀತಾ ಇದ್ದು, ತ್ರಿವಿಕ್ರಮ್ ಖಳ ನಟರ ಜೊತೆ ಫೈಟ್ ಮಾಡಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ – ಸೆಂಟಿಮೆಂಟ್ ಮೂವಿಯಾಗಿದ್ದು, ರಾಷ್ಟ್ರಮಟ್ಟದ ಫೈಟ್ ಮಾಸ್ಟರ್​ಗಳನ್ನು ಕರೆಸಿಕೊಂಡಿದೆ ಚಿತ್ರತಂಡ. 

ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್​ನಲ್ಲಿ ತಮ್ಮ ಛಾಪು ಮೂಡಿಸಿರುವ ಮದ್ರಾಸ್ , ಕಬಾಲಿ, ಕೆಜಿಎಫ್​ನಂತಹ ಸೂಪರ್ ಹಿಟ್ ಚಿತ್ರಗಳ ಸಾಹಸ ದೃಶ್ಯಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಟ್ವಿನ್ ಸಹೋದರರು  ತ್ರಿವಿಕ್ರಮನ ಸಾಹಸ ದೃಶ್ಯಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಆ್ಯಕ್ಷನ್ ಸೀನ್ ಗಳಿಗಾಗಿ  ನೈಸ್ ರಸ್ತೆಯಲ್ಲಿ  ಸೆಟ್ ಹಾಕಲಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. 

LEAVE A REPLY

Please enter your comment!
Please enter your name here