Home P.Special ಜೂನಿಯರ್ ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ ಬರ್ತಿದೆ `ಕ್ರೇಜಿ ಟೀಸರ್’

ಜೂನಿಯರ್ ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ ಬರ್ತಿದೆ `ಕ್ರೇಜಿ ಟೀಸರ್’

ಕ್ರೇಜಿಸ್ಟಾರ್ ರವಿಚಂದ್ರನ್  ಪುತ್ರ ವಿಕ್ರಮ್ `ತ್ರಿವಿಕ್ರಮ’ನಾಗಿ ಬೆಳ್ಳಿಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ `ತ್ರಿವಿಕ್ರಮ’ನ ದರ್ಶನವಾಗಿರುತ್ತಿತ್ತು. ಆದ್ರೆ, ಕೊರೋನಾದಿಂದ ವಿಕ್ರಮ್ ಎಂಟ್ರಿ ತಡವಾಗಿದೆ.  ಆದರೆ, ಅಭಿಮಾನಿಗಳಿಗೆ ಬೇಸರ ಮಾಡಲು ಸಿನಿತಂಡ ರೆಡಿಯಿಲ್ಲ. ಹಾಗಾಗಿ ವಿಕ್ರಮ್​ ಹುಟ್ಟುಹಬ್ಬದ ದಿನ ಸ್ಪೆಷಲ್ ಟೀಸರ್ ಬಿಡುಗಡೆ ಮಾಡೋ ಪ್ಲ್ಯಾನ್ ಮಾಡಿಕೊಂಡಿದೆ.

ಆಗಸ್ಟ್​ 16ರಂದು ವಿಕ್ರಮ್ ಹುಟ್ಟುಹಬ್ಬ. ಅಂದು ವಿಶೇಷ ಟೀಸರ್ ಬಿಡುಗಡೆ ಮಾಡಲು `ತ್ರಿವಿಕ್ರಮ’ ತಂಡ ಮುಂದಾಗಿದೆ. ಸಿನಿಮಾ ರಿಲೀಸ್​ಗೂ ಮುನ್ನವೇ ವಿಕ್ರಂ ತಮ್ಮದೇಯಾದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ವಿಕ್ರಂ ಅಪಿಯರೆನ್ಸ್, ಮ್ಯಾನರಿಸಂಗೆ ಫಿದಾ ಆಗಿರೋ ಫ್ಯಾನ್ಸ್ ನೆಚ್ಚಿನ ನಟನನ್ನು ಬಿಗ್ ಸ್ಕ್ರೀನ್​ನಲ್ಲಿ ಕಣ್ತುಂಬಿಕೊಳ್ಳಲು ವ್ಹೇಟ್ ಮಾಡ್ತಿದ್ದಾರೆ.

ಇನ್ನು ಎರಡೇ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಆಸ್ಟ್ರೇಲಿಯಾದಲ್ಲಿ ಹಾಡುಗಳನ್ನು ಶೂಟ್ ಮಾಡ್ಬೇಕು ಅಂತಿದ್ದ ಚಿತ್ರತಂಡ ಸದ್ಯ ಇಂಡಿಯಾ – ಚೀನಾ ಗಡಿಯಲ್ಲಿ ಚಿತ್ರೀಕರಿಸಲು ರೆಡಿಯಾಗಿದೆಯಂತೆ.  ಈಗಾಗಲೇ ಸಿನಿಮಾದ ಆಡಿಯೋ ರೈಟ್ಸ್​ 50 ಲಕ್ಷ ರೂಗಳಿಗೆ ಎ2 ಮ್ಯೂಸಿಕ್ ಕಂಪನಿಗೆ ಸೋಲ್ಡ್ಔಟ್ ಆಗಿದೆ. 

ವಿಕ್ರಮ್​ಗೆ ನಾಯಕಿಯಾಗಿ `ಸಂತೂರ್ ಮಮ್ಮಿ’ ಖ್ಯಾತಿಯ ಆಕಾಂಕ್ಷ ಶರ್ಮಾ ಅಭಿನಯಿಸಿದ್ದಾರೆ.  ರೋಜ್​​​, ಮಾಸ್​ ಲೀಡರ್​ ಖ್ಯಾತಿಯ ಸಹನಾ ಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದು, ಗೌರಿ ಎಂಟರ್​ಟೈನ್ಮೆಂಟ್​ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments