Home ಸಿನಿ ಪವರ್ ರಿಲೀಸ್​ಗೂ ಮೊದಲೇ ಜ್ಯೂನಿಯರ್ ಕ್ರೇಜಿಸ್ಟಾರ್ ಸಿನಿಮಾ ದಾಖಲೆ..!

ರಿಲೀಸ್​ಗೂ ಮೊದಲೇ ಜ್ಯೂನಿಯರ್ ಕ್ರೇಜಿಸ್ಟಾರ್ ಸಿನಿಮಾ ದಾಖಲೆ..!

ವಿಕ್ರಮ್ ರವಿಚಂದ್ರನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಾರ. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ, ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಹುಡುಗ.
ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ‌ ದುಡಿದು ಸಿನಿಮಾ ಅನುಭವ ಪಡೆದುಕೊಂಡವರು ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ‌ ಪುತ್ರ‌ ವಿಕ್ರಮ್ ರವಿಚಂದ್ರನ್.

ವಿಕ್ಕಿ ಈಗ ‘ತ್ರಿವಿಕ್ರಮ’ ಸಿನಿಮಾ ಮಾಡುತ್ತಿದ್ದಾರೆ. ವಿಕ್ರಮ್ ಹೆಸರಿಗೆ, ಟ್ಯಾಲೆಂಟ್, ಲುಕ್, ಮ್ಯಾನರಿಸಂ ಗೆ ತಕ್ಕನಾದ ಕಥೆಯನ್ನ ನಿರ್ದೇಶಕ ಸಹನಾ ಮೂರ್ತಿ ಹೆಣೆದು, ಶೂಟಿಂಗ್ ಕೂಡ ಮಾಡಿದ್ದಾರೆ. ಸಹನಾ ಮೂರ್ತಿ, ರವಿಚಂದ್ರನ್ ಪುತ್ರನ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅಂದ ಮೇಲೆ ಆ ಸಿನಿಮಾದ ಮೇಲಿನ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇರುತ್ತೆ.

ಅದನ್ನ ಸಹನಾ ಮೂರ್ತಿ ಫುಲ್ ಫಿಲ್ ಮಾಡಿದ್ದಾರೆ ಅನ್ನೋದು ಈಗಾಗ್ಲೆ ಬಂದಿರೋ ತ್ರಿವಿಕ್ರಮ ಸಿನಿಮಾ ಫಸ್ಟ್ ಲುಕ್ ಟೀಸರ್ ಗಳೇ ಸಾರಿ ಸಾರಿ ಹೇಳ್ತಿವೆ. ಇದೀಗ ವರಮಹಾ ಲಕ್ಷ್ಮಿ ಹಬ್ಬದಂದು ತ್ರಿವಿಕ್ರಮನ ಜೋಳಿಗೆಗೆ ಲಕ್ಷ್ಮಿ ಬಂದು ಸೇರಿದ್ದಾಳೆ.

ಜ್ಯೂನಿಯರ್ ಕನಸುಗಾರ ವಿಕ್ರಮ್ ರವಿಚಂದ್ರನ್‌ ಚಿತ್ರರಂಗಕ್ಕೆ ಡೆಬ್ಯೂ ಆಗ್ತಿರೋ‌ ಸಿನಿಮಾ ತ್ರಿವಿಕ್ರಮ. ಸಹನಾ ಮೂರ್ತಿ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿ ವಿಕ್ಕಿಗಾಗೇ ಈ ಸಿನಿಮಾ ಸಿದ್ಧಪಡಿಸಿದ್ದಾರೆ. ನಿರ್ಮಾಪಕ ಸೋಮಣ್ಣ ಜ್ಯೂನಿಯರ್ ಕ್ರೇಜಿಸ್ಟಾರ್​ನ ಸಖತ್ತಾಗಿ ತೋರಿಸಬೇಕು, ಅದೆಷ್ಟೇ ಖರ್ಚಾದ್ರು ಪರವಾಗಿಲ್ಲ ಅಂತ ‘ತ್ರಿವಿಕ್ರಮ’ನಿಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಹಾಡುಗಳನ್ನ ಭಾರತ- ಚೀನಾ, ಭಾರತ- ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸೋಕೆ ಪ್ಲಾನ್ ಮಾಡಿರೋದು.

ನಿರ್ಮಾಪಕ ಸೋಮಣ್ಣರ ಈ ಎಫರ್ಟ್ ಗೆ ಈಗ ಚಿನ್ನದಂತಾ ಬೆಲೆ ಬಂದಿದೆ. ಯಾಕಂದ್ರೆ ತ್ರಿವಿಕ್ರಮ ಸಿನಿಮಾದ ಹಾಡುಗಳು ಮಾರಾಟವಾಗಿದ್ದು, ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ. ಹೌದು.. 50 ಲಕ್ಷಕ್ಕೆ ಸೋಲ್ಡ್ ಔಟ್ ಆಗಿದ್ದು ‘ತ್ರಿವಿಕ್ರಮ’ ಆಲ್ಬಮ್.

ಯೆಸ್, ವಿಕ್ಕಿಯ ತ್ರಿವಿಕ್ರಮನಿಗೆ‌ ಭಾರಿ‌ ಡಿಮ್ಯಾಂಡ್ ಬಂದಿದೆ. ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕುಗಳು 50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನ ಕೇಳಿ ಖುಷಿ ಯಿಂದ ಖರೀದಿಸಿದೆ. ಒಬ್ಬ ಸ್ಟಾರ್ ಹೀರೋನಾ ಸಿನಿಮಾದ ಹಾಡುಗಳೇ 50 ಲಕ್ಷಕ್ಕೆ ಬಿಕರಿಯಾಗೋದು ತೀರಾ ಅಪರೂಪ. ಅಂಥದ್ರಲ್ಲಿ ವಿಕ್ರಂ ರವಿಚಂದ್ರನ್ ಮೊದಲ‌ ಸಿನಿಮಾದ ಆಲ್ಬಮ್, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ.
 
ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಬಹದ್ದೂರ್ ಚೇತನ್, ಹಾಗೂ ಯೋಗರಾಜ್ ಭಟ್ ಸಾಹಿತ್ಯ ಪೋಣಿಸಿದ್ದಾರೆ. ಅರ್ಜುನ್ ಜನ್ಯ ಭರ್ಜರಿ‌ ಮ್ಯೂಸಿಕ್ ನೀಡಿದ್ದು, ವಿಜಯ್ ಪ್ರಕಾಶ್, ಹಾಗೂ ಸಂಚಿತ್ ಹೆಗಡೆ‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ತ್ರಿವಿಕ್ರಮ‌ ಸಿನಿಮಾದ ಹಾಗಳ ಸೌಂಡು ಮಾರುಕಟ್ಟೆಯಲ್ಲಿ ಜೋರಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆಯನ್ನ ಚಿತ್ರತಂಡ ಉಳಿಸಿಕೊಳ್ಳುತ್ತೆ ಅನ್ನೋದಕ್ಕೆ‌ ಇದೇ ಸಾಕ್ಷಿ.

 

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments