Home ರಾಜ್ಯ ಪ್ರಿಯಕರನ ಮನೆಗೆ ಪತ್ನಿಯನ್ನು ಬಿಟ್ಟು ಬಂದ ಪತಿ; ಮಾಜಿ ಪ್ರಿಯತಮೆ ಬೇಡ ಅಂತ ಮನೆ ಬಿಟ್ಟ...

ಪ್ರಿಯಕರನ ಮನೆಗೆ ಪತ್ನಿಯನ್ನು ಬಿಟ್ಟು ಬಂದ ಪತಿ; ಮಾಜಿ ಪ್ರಿಯತಮೆ ಬೇಡ ಅಂತ ಮನೆ ಬಿಟ್ಟ ಪ್ರಿಯಕರ..!

ಪ್ರೀತಿ ಮಾಯೆಯೋ..? ಪ್ರೀತಿ ಹುಚ್ಚೋ..? ಇದನ್ನು ಅರ್ಥ ಮಾಡಿಕೊಳ್ಳೋದು ಕಷ್ಟವೇ ಬಿಡಿ. ಈಗ ನಾವು-ನೀವು ದಿನನಿತ್ಯ ಹತ್ತಾರು ಲವ್​ ಸ್ಟೋರಿಗಳನ್ನು ನೋಡ್ತಾ ಇರ್ತೀವಿ, ಕೇಳ್ತಾ ಇರ್ತೀವಿ. ಕೆಲವೊಂದು ಲವ್​ ಸ್ಟೋರಿಗಳು ವ್ಹಾವ್ ಅಂತ ಅನಿಸುತ್ತವೆ, ತುಂಬಾನೇ ಗ್ರೇಟ್ ಅನಿಸಿಕೊಳ್ತಾವೆ. ಅವುಗಳಿಗೆ ತದ್ವಿರುದ್ಧವಾಗಿ ಕೆಲವೊಂದು ಪ್ರೇಮ್​ಕಹಾನಿಗಳು ತುಂಬಾ ವಿಚಿತ್ರ ಅನಿಸಿಕೊಳ್ಳುತ್ತವೆ..! ಇಂಥಾ ಒಂದು ಲವ್​ ಸ್ಟೋರಿ ಇಲ್ಲಿದೆ.
ಇದು ವಿಚಿತ್ರ ಅನಿಸಿದ್ರೂ.. ಇಂಟ್ರೆಸ್ಟಿಂಗ್ ಆಗಿದೆ. ದೂರದೆಲ್ಲೆಲ್ಲೋ ನಡೆದ ಅಂತೆ-ಕಂತೆಯ ಲವ್ ಸ್ಟೋರಿ ಇದಲ್ಲ. ನಮ್ಮ ಕೊಪ್ಪಳದ ಗಂಗಾವತಿಯಲ್ಲಿ ನಡೆದಿರೋ ತ್ರಿಕೋನ ಪ್ರೇಮಕಥೆ..! ಅರ್ಥಾತ್ ಟ್ರಯಾಂಗಲ್ ಲವ್ ಸ್ಟೋರಿ. ಈ ಸ್ಟೋರಿಗೆ ಇಬ್ಬರು ಕಥಾ ನಾಯಕರು.. ಅವಳೊಬ್ಬಳೇ ನಾಯಕಿ..!
ಹೌದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಟ್ನೆಕಲ್ ಗ್ರಾಮದಲ್ಲಿ ನಡೆದಿರೋ ರಿಯಲ್ ಲವ್ ಸ್ಟೋರಿ. ಆಕೆಯ ಹೆಸರು ಬಸಮ್ಮ ಅಂತ. ಆಕೆ ಮದುವೆಗೂ ಮುನ್ನ ವಿನಯ್ ಕುಮಾರ್ ಅನ್ನೋ ಯುವಕನನ್ನು ಪ್ರೀತಿಸ್ತಾ ಇದ್ರು. ಆ ವಿನಯ್​ ಕುಮಾರ್ ಕೂಡ ಬಸಮ್ಮರನ್ನು ಲವ್ ಮಾಡ್ತಿದ್ದರು. ಒಂದೇ ಮಾತಲ್ಲಿ ಹೇಳ್ಬೇಕಂದ್ರೆ ಬಸಮ್ಮ- ವಿನಯ್​ ಕುಮಾರ್​ ಅವರದ್ದು ಟು ವೇ ಲವ್ ಆಗಿತ್ತು.
ಆದ್ರೆ ಈ ಲವ್ , ಗಿವ್ ಅಂದ್ರೆ ಫ್ಯಾಮಿಲೀಲಿ ವಿರೋಧ ಸಹಜ ಅಲ್ವಾ..? ಅದರಲ್ಲೂ ಬೇರೆ ಬೇರೆ ಜಾತಿ ಅಂದ್ರೆ ಮನೆಯಲ್ಲಿ ಮದ್ವೆಗೆ ಗ್ರೀನ್​ ಸಿಗ್ನಲ್​ ಕೊಡೋದು ಮರುಭೂಮಿಯಲ್ಲಿ ನೀರು ಸಿಕ್ಕಂತೆ..! ಬಸಮ್ಮ- ವಿನಯ್​​ ಲವ್​ಸ್ಟೋರಿಯಲ್ಲೂ ಅದೇ ಆಗಿದ್ದು. ಮನೆಯಲ್ಲಿ ಒಪ್ಪಲಿಲ್ಲ. ಬಸಮ್ಮ ಅವರಿಗೆ ರವಿ ಅನ್ನೋ ಬೇರೆ ಹುಡುಗನನ್ನು ನೋಡಿ ಮದ್ವೆ ಮಾಡಿಯೇ ಬಿಟ್ಟರು.
ಬಸಮ್ಮ ರವಿ ಅವರನ್ನು ಮದ್ವೆಯಾಗಿ ಹೆಚ್ಚು ಕಮ್ಮಿ ಒಂದು ವರ್ಷವಾಗಿದೆ. ಈಗ ಆಕೆಗೆ ಮತ್ತೆ ಪ್ರಿಯಕರ ವಿನಯ್​ಕುಮಾರೇ ಬೇಕು ಅಂತ ಅನಿಸಿಬಿಟ್ಟಿದೆ..! ಅದಕ್ಕಾಗಿ ಪತಿ ರವಿಯನ್ನು ಬಿಟ್ಟು ವಿನಯ್ ಮನೆಗೆ ಬಂದು ಬಿಟ್ಟಿದ್ದಾರೆ. ವಿನಯ್​​ ಬಸಮ್ಮನ ಹಠಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾರೆ..! ಆದರೆ, ವಿನಯನೇ ಬೇಕು ಅಂತ ಬಸಮ್ಮ ಪ್ರತಿಭಟನೆ ನಡೆಸುತ್ತಿದ್ದಾರೆ.
ನನ್ನ ಮದ್ವೆ ಆದ್ಮೇಲೂ ನಾನು ವಿನಯ್ ಜೊತೆ ಕಾಂಟೆಕ್ಟ್​ನಲ್ಲಿದ್ದೆ ಅಂತಾರೆ ಬಸಮ್ಮ. ಆಕೆಯ ಪತಿ ರವಿ ಡಿವೋರ್ಸ್​ ನೀಡಿ ವಿನಯ್​ ಮನೆ ಬಳಿ ಆಕೆಯನ್ನು ಬಿಟ್ಟು ಬಂದಿದ್ದಾರಂತೆ..! ಆದ್ರೆ ವಿನಯ್,”ನಾವು ಪ್ರೀತ್ಸಿದ್ದು ನಿಜ. ಆದ್ರೆ, ಆಕೆಯ ಮದ್ವೆ ಆದ್ಮೇಲೆ ನಾನು ಅವರ ಸಹವಾಸಕ್ಕೇ ಹೋಗಿಲ್ಲ..ಕಾಂಟೆಕ್ಟ್​ನಲ್ಲೇ ಇಲ್ಲ.. ಇನ್ನೊಂದು ತಿಂಗಳಲ್ಲಿ ನನ್ನ ಮದ್ವೆ ಇದೆ. ಆಕೆ ಸುಮ್ಮನೇ ಕಾಟ ಕೊಡ್ತಿದ್ದಾಳೆ” ಅಂತಿದ್ದಾರೆ..!
ಹೀಗೆ ಮದ್ವೆ ಆದ ಮೇಲೆ ಪತಿಯನ್ನು ಬಿಟ್ಟು ಪ್ರಿಯಕರನೇ ಬೇಕು ಎನ್ನೋ ಪತ್ನಿ… ಪತ್ನಿಯನ್ನು ಪ್ರಿಯಕರ ಮನೆ ಬಳಿ ಬಿಟ್ಟು ಬಂದ ಪತಿ…! ಮಾಜಿ ಪ್ರಿಯತಮೆಯ ಸಹವಾಸವೇ ಬೇಡ ಎನ್ನುತ್ತಿರೋ ಪ್ರಿಯಕರ..! ಮುಂದೇನಾಗುತ್ತೆ ಅನ್ನೋದೇ ಕುತೂಹಲ…

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments