ಶಿವಮೊಗ್ಗ: ಕಿಲ್ಲರ್ ಕೊರೋನಾ ಭೀತಿ ಕಡಿಮೆ ಆಗಿದೆ ಎನ್ನುವ ಬೆನ್ನಲೇ, ಬ್ರಿಟನ್ ನ ರೂಪಾಂತರ ಕೊರೋನ ಭೀತಿ ಶುರುವಾಗಿದೆ.
ಬ್ರಿಟನ್ ನಿಂದ ಬಂದ ಒಂದೇ ಕುಟುಂಬದ ನಾಲ್ವರಿಗೆ ಶಿವಮೊಗ್ಗದಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಡಿಸೆಂಬರ್ 21 ರಂದು ನಾಲ್ವರು ಯುಕೆಯಿಂದ ಶಿವಮೊಗ್ಗಕ್ಕೆ ಬಂದಿದ್ದಾರೆ. ಶಿವಮೊಗ್ಗದಲ್ಲಿ ರೂಪಾಂತರ ಕೊರೋನಾ ಭೀತಿ ಎದುರಾಗಿದೆ.
ಶಿವಮೊಗ್ಗ ಕೊವೀಡ್ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಪಾಸಿಟಿವ್ ಇರುವುದು ಧೃಡವಾಗಿದೆ. ಇದು ಸೋಂಕಿತರಲ್ಲಿ ರೂಪಾಂತರ ಕೊರೋನ ಇದೆಯೇ? ಈ ಬಗ್ಗೆ ಖಚಿತಪಡಿಸಿಕೊಳ್ಳಲು ವೈದ್ಯರು ಪಾಸಿಟಿವ್ ಧೃಡ ಪಡಿಸಲು ಬೆಂಗಳೂರಿಗೆ ಸ್ಯಾಂಪಲ್ ಕಳುಹಿಸಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರು ಲ್ಯಾಬ್ ನಿಂದ ವರದಿ ಬರುವ ಸಾಧ್ಯತೆ ಇದೆ.