ಇಂದಿನಿಂದ ರೈಲು ಸಂಚಾರ ಆರಂಭ : ಪ್ರಯಾಣಿಕರಿಗೆ ನಿಯಮಗಳು ಅನ್ವಯ

0
726

ಬೆಂಗಳೂರು: ಲಾಕ್​ಡೌನ್ ಆದಾಗಿನಿಂದಲೂ ಅನೇಕರು ತಮ್ಮ ತಮ್ಮಊ ರುಗಳಿಗೆ ತೆರಳಲು ಸಾಧ್ಯವಾಗದೇ ಮರುಕ ಪಡುವಂತಾಗಿತ್ತು. ಆದರೆ ಇದೀಗ ಲಾಕ್​ಡೌನ್ ಸಡಿಲಿಕೆ ಮಾಡಿರುವ ಸರ್ಕಾರ ಊರುಗಳಿಗೆ ಸಂಚರಿಸುವವರಿಗೆ ಬಸ್ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಇಂದಿನಿಂದ ರೈಲು ಸಂಚಾರ ಪ್ರಾರಂಭವಾಗಿದೆ. ಈ ರೈಲು ಸಂಚಾರ ವಿಭಿನ್ನವಾಗಿರಲಿದ್ದು, ಕೆಲವೊಂದು ನಿಯಮಗಳನ್ನು ಒಳಗೊಂಡಿದೆ.

ಇಂದಿನಿಂದ ರೈಲು ಸೇವೆ ಪ್ರಾರಂಭವಾಗಿದ್ದು, ನಿನ್ನೆ ಸಂಜೆ 4ಗಂಟೆಯಿಂದ ಆನ್​ಲೈನ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಲಾಗಿತ್ತು. ಟಿಕೆಟ್ ಆರಂಭಿಸದ ಕೆಲವೇ ನಿಮಿಷಗಳಲ್ಲಿ ರೈಲ್ವೆ ಇಲಾಖೆಯ ವೆಬ್​ಸೈಟ್ ಕ್ರಾಶ್ ಆಗಿತ್ತು. ಬಳಿಕ ಸಂಜೆ ಏಳು ಗಂಟೆಗೆ ಟಿಕೆಟ್ ಪ್ರಾರಂಭವಾಗಿದ್ದು, ಕೇವಲ ಅರ್ಧಗಂಟೆಯಲ್ಲಿ ಬೆಂಗಳೂರಿನಿಂದ ದೆಹಲಿಗೆ ತೆರಳುವ ಟಿಕೆಟ್​ಗಳು ಸಂಪೂರ್ಣ ಬುಕ್ ಆಗಿದ್ದವು. ಇನ್ನು ಬೆಂಗಳೂರಿನಿಂದ ನವದೆಹಲಿಗೆ ಸೂಪರ್ ಫಾಸ್ಟ್ ರೈಲು ಚಲಿಸಲಿದ್ದು, ಪ್ರತಿದಿನ ರೈಲು ಸಂಚಾರ ನಡೆಯಲಿದೆ. ದೆಹಲಿ ಮಾತ್ರವಲ್ಲದೆ ಬೇರೆ ಕಡೆಗಳಿಗೂ ರೈಲು ಸಂಚರಿಸಲಿದೆ. ಈ ಬಗ್ಗೆ ಮಾಹಿತಿಯನ್ನು ರೈಲ್ವೆ ಇಲಾಖೆ ವೆಬ್​ಸೈಟ್​ನಲ್ಲಿ ಪಡೆಯಬಹುದು.

ಇನ್ನು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಲವೊಂದು ನಿಯಮಗಳು ಅನ್ವಯವಾಗುತ್ತದೆ. ಅವು ಈ ಕೆಳಗಿನಂತಿವೆ.

  • ಪ್ರಯಾಣಿಕರು ತಮ್ಮ ರೈಲು ಹೊರಡುವ ಸಮಯಕ್ಕಿಂತ 90 ನಿಮಿಷ ಮೊದಲೇ ನಿಲ್ದಾಣಕ್ಕೆ ಬರಬೇಕು
  • ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನರ್​ನಿಂದ ಪ್ರಯಾಣಿಕರ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತೆ
  • ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸಬೇಕು
  • ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು
  • ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ
  • ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರಯಾಣಿಕರೇ ಮಾಡಿಕೊಲ್ಳಬೇಕು
  • ಹೊದಿಕೆ, ಕಂಬಳಿಗಳನ್ನು ರೈಲಿನಲ್ಲಿ ನೀಡಲಾಗುವುದಿಲ್ಲ
  •  ಕಡಿಮೆ ಲಗೇಜ್ ತೆಗೆದುಕೊಂಡು ಹೋಗೋದು ಉತ್ತಮ
  • ಕನ್ಫರ್ಮ್ ಆಗಿರುವ ಇ-ಟಿಕೆಟ್ ಇದ್ದವರಿಗೆ ಮಾತ್ರ ನಿಲ್ದಾಣದ ಒಳಗಡೆ ಪ್ರವೇಶ ನೀಡಲಾಗುತ್ತದೆ

 

LEAVE A REPLY

Please enter your comment!
Please enter your name here