Home ರಾಜ್ಯ ನಂದಿಬೆಟ್ಟ ಪ್ರವಾಸಿಗರು ರೋಡ್ ನಲ್ಲಿ ಟೈಮ್​​​​​​​ ಪಾಸ್ !

ನಂದಿಬೆಟ್ಟ ಪ್ರವಾಸಿಗರು ರೋಡ್ ನಲ್ಲಿ ಟೈಮ್​​​​​​​ ಪಾಸ್ !

ದೇವನಹಳ್ಳಿ : ಸಿಲಿಕಾನ್ ಸಿಟಿಯ ಕೂಗಳತೆ ದೂರದಲ್ಲಿರುವ ನಂದಿ ಬೆಟ್ಟ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ, ಪ್ರತಿಯೊಬ್ಬರು ನಂದಿ ಬೆಟ್ಟಕ್ಕೆ ಹೋಗಿ ಬಂದೇ ಇರ್ತಾರೆ. ಇನ್ನೂ ವೀಕ್ ಎಂಡ್ ಬಂದ್ರೆ ಸಾಕು ಬೆಳಿಗ್ಗೆಯಿಂದ ರಾತ್ರಿ ವರೆಗೂ ನಂದಿ ಬೆಟ್ಟ ಹಾಗೂ ನಂದಿ ಬೆಟ್ಟದ ರೋಡ್ ಪುಲ್ ಪ್ರವಾಸಿಗರಿಂದ ಇರ್ತಾ ಇತ್ತು. ಆದ್ರೆ ಕೊರೋನಾ ಎಫೆಕ್ಟ್ ನಿಂದ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ನಿರ್ಬಂಧ ಇದ್ರೂ ಸಹ ನಂದಿ ಬೆಟ್ಟಕ್ಕೆ ದಿನನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇನ್ನೂ ವೀಕ್ ಎಂಡ್ ನಲ್ಲಿ ಮಾತ್ರ ಅತಿ ಹೆಚ್ಚಿನ ಜನ ಸಂಖ್ಯೆ ಆಗಮಿಸುತ್ತಾರೆ. ಆದ್ರೆ ನಂದಿ ಬೆಟ್ಟದ ವೀಕ್ಷಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅನುಮತಿ ನೀಡದ ಕಾರಣ ಪ್ರವಾಸಿಗರು ನಂದಿ ಬೆಟ್ಟದ ರಸ್ತೆಯಲ್ಲಿರುವ ರೆಸಾರ್ಟ್, ರೆಸ್ಟೋರೆಂಟ್,ಹೋಟೆಲ್, ಕೆಫೆಗಳಲ್ಲಿ ಕಾಲ ಕಳೆದು ಹಿಂದಿರುಗಿ ಹೋಗುತ್ತಿದ್ದಾರೆ.

ಅನೇಕ ಪ್ರವಾಸಿಗರು ದಿನನಿತ್ಯ ನಂದಿ ಬೆಟ್ಟದತ್ತ ಮಾಹಿತಿ ತಿಳಿಯದೇ ಆಗಮಿಸುತ್ತಿದ್ದಾರೆ. ಬೆಟ್ಟದ ಮೇಲೆ ಹೋಗುವುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ನಿರ್ಬಂಧ ನೋಡಿ ಹಿಂದಿರುಗಿ ತಮಗೆ ಇಷ್ಟವಾದ ಸ್ಥಳಗಳಲ್ಲಿ ಟೈಮ್​​ ಪಾಸ್ ಮಾಡಿ ಹಿಂದಿರುಗುತ್ತಿದ್ದಾರೆ. ಇನ್ನೂ ಕೊರೋನಾ ಎಫೆಕ್ಟ್ ನಿಂದ ವ್ಯಾಪಾರ ಇಲ್ಲದೇ ನಷ್ಟ ಅನುಭವಿಸುತ್ತಿದ್ದ ಅನೇಕ ವ್ಯಾಪರಸ್ಥರು ಇದೀಗ ಪ್ರವಾಸಿಗರ ಆಗಮನದಿಂದ ಸ್ಪಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಈಗಾಗಲೇ ಅನೇಕ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನೀಡಿದ್ದು ನಂದಿ ಬೆಟ್ಟಕ್ಕೂ ಸಹ ಪ್ರವಾಸಿಗರಿಗೇ ಪ್ರವೇಶ ನೀಡಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಇನ್ನೂ ಕೆಲವೇ ದಿನಗಳಲ್ಲಿ ಅನುಮತಿ ಸಿಗಲಿದೆ ನಂತರ ನಂದಿ ಬೆಟ್ಟದ ಪ್ರವಾಸಿಗರು ನಿರ್ಭೀತಿಯಿಂದ ಆಗಮಿಸಬಹುದು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments