Saturday, May 28, 2022
Powertv Logo
Homeಸಿನಿಮಾಪ್ರಸ್ತುತ ಸಮಾಜದ ಕೈಗನ್ನಡಿ ತೋತಾಪುರಿಗೆ ಕಿಚ್ಚ ಮೆಚ್ಚುಗೆ

ಪ್ರಸ್ತುತ ಸಮಾಜದ ಕೈಗನ್ನಡಿ ತೋತಾಪುರಿಗೆ ಕಿಚ್ಚ ಮೆಚ್ಚುಗೆ

ನವರಸಗಳ ತೋತಾಪುರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸಾಥ್ ನೀಡಿದ್ರು. ಪ್ರಸ್ತುತ ಸಮಾಜದ ಕೈಗನ್ನಡಿಯಂತಿರೋ ಟ್ರೈಲರ್ ಲಾಂಚ್ ಮಾಡಿ ಡಾಲಿ, ಜಗ್ಗಣ್ಣನನ್ನ ಮೆಚ್ಚಿದ್ರು.

ಮತೀಯ ಗಲಭೆಗಳು ನಡೆಯುತ್ತಿರೋ ಪ್ರಸ್ತುತ ಸಮಾಜದಲ್ಲಿ ಅಶಾಂತಿ ಮೂಡಿದೆ. ಯಾರೋ ಪುಂಡ ಪೋಕರಿಗಳು ಮಾಡೋ ಗಲಭೆಗಳಿಗೆ ಸಮಾಜ ಬಲಿಯಾಗ್ತಿದೆ. ಸಮಾಜದ ಸ್ವಾಸ್ತ್ಯ ಹಾಳಾಗ್ತಿದೆ. ಆದ್ರೆ ಅಂತಹ ಕೃತ್ಯಗಳನ್ನ ಹತ್ತಿಕ್ಕುವಂತಹ, ನೋವು- ನಷ್ಟಗಳಿಗೆ ಮುಲಾಮು ಆಗೋ ಅಂತಹ ಕಂಟೆಂಟ್ ಬೇಸ್ಡ್ ಸಿನಿಮಾ ಅಂದ್ರೆ, ಅದು ತೋತಾಪುರಿ.

ಇದು ತೋತಾಪುರಿ ಚಾಪ್ಟರ್ ಒಂದರ ಟ್ರೈಲರ್ ಝಲಕ್. ಸೂಪರ್ ಹಿಟ್ ಸಿನಿಮಾಗಳ ಡೈರೆಕ್ಟರ್ ಕೆಎ ಸುರೇಶ್ ಹಾಗೂ ನೀರ್​ದೋಸೆ ಫೇಮ್ ವಿಜಯ್ ಪ್ರಸಾದ್ ಕಾಂಬೋನಲ್ಲಿ ಬರ್ತಿರೋ ಕಾಮಿಡಿ ಕಮ್ ಎಮೋಷನಲ್ ಎಂಟರ್​ಟೈನರ್. ಮಾನವೀಯತೆಗಿಂದ ಜಾತಿ, ಧರ್ಮ ದೊಡ್ಡದಲ್ಲ ಅನ್ನೋದನ್ನ ಸಾರುವಂತಹ ಈ ಚಿತ್ರದ ಟ್ರೈಲರ್​ನ ಕಿಚ್ಚ ಸುದೀಪ್ ಲಾಂಚ್ ಮಾಡಿ, ಫುಲ್ ಮಾರ್ಕ್ಸ್ ಕೊಟ್ರು.

ನಾಯಕನಟ ಜಗ್ಗೇಶ್, ಡಾಲಿ ಧನಂಜಯ, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಇವೆಂಟ್​ನಲ್ಲಿ ಭಾಗಿಯಾಗಿದ್ರು. ಖಾಸಗಿ ಹೋಟೆಲ್​ನಲ್ಲಿ ನಡೆದ ಈ ಕಾರ್ಯಕ್ರಮ ಒಂದಷ್ಟು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಆಯ್ತು. ಸುದೀಪ್ ಒಂದು ಸೆಲ್ಫ್ ಮೇಡ್ ಮೂರ್ತಿ. ಅದಕ್ಕೀಗ ಸಿಕ್ಕಾಪಟ್ಟೆ ಪೂಜೆಗಳು ನಡೀತಿವೆ ಅಂದ್ರು ಜಗ್ಗಣ್ಣ.

ಜಗ್ಗೇಶ್ ಹಾಗೂ ಡಾಲಿ ಧನಂಜಯ ಕುರಿತು ಸುದೀಪ್ ಹಾಡಿ ಹೊಗಳಿದ್ರು. ಅದ್ರಲ್ಲೂ ಡಾಲಿಯ ಅಪ್ಪಿಯರೆನ್ಸ್ ಬಗ್ಗೆ ಕೊಂಡಾಡಿದ್ರು. ಇನ್ನು ನಾನೊಂದು ಅಡುಗೆ ಆದಾಗ ಅದು ರುಚಿಸೋದು ನಾಲಗೆಗಳಿಗೆ ಬಿಟ್ಟಿದ್ದು ಅಂದ್ರು ಅಭಿನಯ ಚಕ್ರವರ್ತಿ.

ವಿಜಯ್ ಪ್ರಸಾದ್​ರ ಬರವಣಿಗೆಯ ಶೈಲಿ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಔಟ್ ಅಂಡ್ ಔಟ್ ಕಾಮಿಡಿ ಮಾಡದೆ, ಹಾಸ್ಯದ ಜೊತೆ ಭಾವನೆಗಳ ರಸದೌತಣ ಉಣಬಡಿಸಲಿದ್ದಾರೆ. ಬಾಗ್ಲು ತೆಗಿ ಮೇರಿ ಜಾನ್ ಅನ್ನೋ ಹಾಡು ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತು. ಈಗ ಟ್ರೈಲರ್ ಸರತಿ ಶುರುವಾಗಿದೆ.

ಬಹುಭಾಷೆಯಲ್ಲಿ ಸಿನಿಮಾ ರಿಲೀಸ್ ಆಗ್ತಿದ್ರೂ, ನಾನು ಮಾತ್ರ ಕನ್ನಡದಲ್ಲಿ ಮಾತ್ರ ಡಬ್ ಮಾಡಿದ್ದೇನೆ ಅಷ್ಟೇ ಅಂದ್ರು ಜಗ್ಗಣ್ಣ. ಅಲ್ಲದೆ, ನನ್ನ ಉಸಿರಿರೋವೆಗೂ ಕನ್ನಡಕ್ಕಷ್ಟೇ ನಾನು ಅಂಕಿತ ಅಂದ್ರು. ಇನ್ನು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ರಿಲೀಸ್ ಆಗ್ತಿದ್ದು, ಅನೂಪ್ ಸೀಳಿನ್ ಸಂಗೀತ ಸಾಥ್ ನೀಡಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ಅನ್ಯೋನ್ಯತೆಯನ್ನ ಸಾರುವ ಈ ಸಿನಿಮಾ ಸಮಾಜಕ್ಕೊಂದು ಬಲವಾದ ಸಂದೇಶ ನೀಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

- Advertisment -

Most Popular

Recent Comments