ಕಲಬುರಗಿ/ಜೇವರ್ಗಿ : ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ 14 ವರ್ಷದ ಬಾಲಕನ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವಂತಹ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ್ ಎಂಬ ಬಾಲಕ ಅದೇ ಗ್ರಾಮದ ಅನ್ಯಕೋಮಿನ ಹಾಗೂ ವಯಸ್ಸಲ್ಲಿ ತನಗಿಂತ ಹಿರಿಯಳಿದ್ದ ಯುವತಿಯನ್ನ ಪ್ರೀತಿ ಮಾಡುತ್ತಿದ್ದ. ಜೊತೆಗೆ ಆಕೆಗೆ ಹೊಸ ಮೊಬೈಲ್ನ್ನ ಸಹ ಕೊಡಿಸಿದ್ದ. ಆದರೆ ಇಬ್ರ ಪ್ರೀತಿಗೆ ಯುವತಿ ತಾಯಿಯ ಪರಿಚಯಸ್ಥ ಮೆಹಬೂಬ್ ಎಂಬಾತ ಅಡ್ಡಗಾಲು ಹಾಕಿದ್ದ. ಪ್ರೀತಿ ಮಾಡಬೇಡಿ ಅಂತಾ ಮೆಹಬೂಬ್ ಎಷ್ಟು ಸಾರಿ ಹೇಳಿದ್ರು ಇಬ್ರು ಪ್ರೀತಿ ಮುಂದುವರಿಸಿದ್ದರು. ಆದರೆ ಇದು ಹೆಚ್ಚಾದಂತೆ ಮೆಹಬೂಬ್ ತನ್ನ ಸ್ನೇಹಿತರ ಜೊತೆಗೂಡಿ ಬಾಲಕ ಮಹೇಶನನ್ನ ಹಿಡಿದುಕೊಂಡು ಹೋಗಿ ಮರ್ಮಾಂಗಕ್ಕೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನ ಚೀಲದಲ್ಲಿ ಹಾಕಿ ನರಿಬೋಳ-ಚಾಮನೂರ ಭೀಮಾ ನದಿಯಲ್ಲಿ ನಿರ್ಮಾಣವಾಗ್ತಿರೋ ಬ್ರೀಡ್ಜ್ ಕೆಳಗೆ ಶವ ಬಿಸಾಕಿದ್ದಾರೆ.ಆದರೆ ಇತ್ತ ಬಾಲಕ ಮಹೇಶ್ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ.ನಿನ್ನೆ ಜೇವರ್ಗಿ ಠಾಣೆ ಪೊಲೀಸರು ಹುಡುಕಾಟ ನಡಸುತ್ತಿರುವಾಗ ಅಪರಿಚಿತ ಶವ ಪತ್ತೆಯಾಗಿದೆ.ತನಿಖೆ ನಡೆಸಿದ ಪೊಲೀಸರು, ಅಪರಿಚಿತ ಶವ ಅಲ್ಲ ಅದು, ನರಿಬೋಳ ಗ್ರಾಮದ ಬಾಲಕ ಮಹೇಶನದು ಅಂತಾ ಹೇಳಿದ್ದಾರೆ.ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.