Thursday, September 29, 2022
Powertv Logo
Homeಕ್ರೀಡೆಕ್ಷಣಾರ್ಧದಲ್ಲಿ ಕ್ಯಾಚ್ ಹಿಡಿದ ಟಾಮ್ ಹೆಲ್ಮ್

ಕ್ಷಣಾರ್ಧದಲ್ಲಿ ಕ್ಯಾಚ್ ಹಿಡಿದ ಟಾಮ್ ಹೆಲ್ಮ್

ಇಂಗ್ಲೆಂಡ್‌: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 100-ಬಾಲ್ ಪಂದ್ಯಾವಳಿ ‘ದಿ ಹಂಡ್ರೆಡ್’ ಲೀಗ್​ನಲ್ಲಿ ಬೌಲರ್​ ಒಬ್ಬ ಕೇವಲ ಒಂದು ಕ್ಯಾಚ್​ ಮೂಲಕ ಎಲ್ಲರನ್ನೂ ದಂಗಾಗಿಸಿದ್ದಾನೆ.

ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ಮತ್ತು ಟ್ರೆಂಟ್ ರಾಕೆಟ್ಸ್ ನಡುವಿನ ಪಂದ್ಯದ ವೇಳೆ ಟಾಮ್ ಹೆಲ್ಮ್ ಹಿಡಿದ ಈ ಕ್ಯಾಚ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಟ್ರೆಂಟ್ ರಾಕೆಟ್ಸ್ ಪರ ಆಡುತ್ತಿರುವ ಬ್ಯಾಟ್ಸ್‌ಮನ್ ಕಾಲಿನ್ ಮನ್ರೋ, ಹೆಲ್ಮ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡಿದ್ದರು. ಆದರೆ ಕ್ಷಣಾರ್ಧದಲ್ಲೇ ಅದ್ಭುತ ಡೈವ್ ಕ್ಯಾಚ್ ಹಿಡಿಯುವ ಮೂಲಕ ಟಾಮ್ ಹೆಲ್ಮ್ ಎಲ್ಲರನ್ನು ನಿಬ್ಬೆರಗಾಗಿಸಿದರು. ಇದರೊಂದಿಗೆ 8 ಎಸೆತಗಳಲ್ಲಿ 11 ರನ್ ಗಳಿಸಿದ್ದ ಮನ್ರೊ ಇನಿಂಗ್ಸ್ ಕೂಡ ಅಂತ್ಯವಾಯಿತು.

- Advertisment -

Most Popular

Recent Comments