ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 63 ಸೋಂಕಿಗೆ ತುತ್ತಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 925 ಕ್ಕೆ ಏರಿಕೆಯಾಗಿದೆ. ಮಧ್ಯಾಹ್ನ ಬಂದಿರುವ ಹೆಲ್ತ್ ಬುಲೆಟಿನ್ ಪ್ರಕಾರ ಸೋಂಕಿತರ ಸಂಖ್ಯೆ 42 ರಷ್ಟು ಏರಿಕೆಯಾಗಿದ್ದು, ಸಂಜೆಯಾಗುತ್ತಲೇ ಅದಕ್ಕೆ 21 ಜನ ಸೇರಿಕೊಂಡು ಒಟ್ಟು ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ ಪತ್ತೆಯಾದ 63 ಜನ ಸೋಂಕಿತರಲ್ಲಿ ಬಾಗಲಕೋಟೆಯಲ್ಲಿ 15, ಧಾರವಾಡ 9, ಯಾದಗಿರಿ 2,ಹಾಸನ 5, ಬೆಂಗಳೂರು 3, ಬೀದರ್ 2, ದಕ್ಷಿಣ ಕನ್ನಡ 2, ಕಲಬುರಗಿ, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ಬಳ್ಳಾರಿಯಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ. ಸಂಜೆಯ ಹೆಲ್ತ್ ಬುಲೆಟಿನ್ನಲ್ಲಿ ಮಧ್ಯಾಹ್ನ ಸೋಂಕು ಪತ್ತೆಯಾಗದ ಜಿಲ್ಲೆಯಲ್ಲಿ ಸಂಜೆ ಸೊಂಕು ಪತ್ತೆಯಾಗಿದೆ. ಕೋಲಾರದಲ್ಲಿ 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗದಗದಲ್ಲಿ 3, ದಾವಣಗೆರೆಯಲ್ಲಿ 12 ಹಾಗೂ ಬೆಂಗಳೂರಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ದಾವಣಗೆರೆಯಲ್ಲಿ ಬೆಳಗ್ಗೆ ಕೊರೋನಾ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಸಂಜೆಯಾಗುತ್ತಲೇ 12 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ 6 ಜನ ಸೋಂಕಿತರು ಅಹಮದಾಬಾದ್ಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿರುತ್ತದೆ. ಇನ್ನುಳಿದಂತೆ ಪೇಷೆಂಟ್ 696 ವ್ಯಕ್ತಿಯಿಂದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸೋಂಕು ಹರಡಿದೆ. ಪೇಷೆಂಟ್ 695 ರ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿದೆ.
ಕೋಲಾರದಲ್ಲಿ ಇದುವರೆಗೆ ಯಾವುದೇ ಕೇಸ್ಗಳು ಪತ್ತೆಯಾಗದೇ ಗ್ರೀನ್ ಝೋನ್ ವ್ಯಾಪ್ತಿಗೆ ಒಳಪಟ್ಟಿತ್ತು. ಕೋಲಾರದಲ್ಲಿ ಪತ್ತೆಯಾದ ಕೇಸ್ಗಳಲ್ಲಿ ಇಬ್ಬರು ಒರಿಸ್ಸಾಗೆ ಪ್ರಯಾಣ ಬೆಳೆಸಿದ ಹಿನ್ನೆಲೆ ಸೋಂಕು ಹರಡಿದೆ. ಇನ್ನೊಬ್ಬ ಸೋಂಕಿತ ಚೆನ್ನೈಗೆ ತೆರಳಿದ್ದರು. ಇನ್ನಿಬ್ಬರು ಸೋಂಕಿತ ರಿಗೆ ವೈರಸ್ ಯಾವ ಮೂಲದಿಂದ ಬಂದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಗದಗದಲ್ಲಿ ಸಮಜೆ ಮೂವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲಿ ಒಬ್ಬ ಸೋಂಕಿತ ಅಹಮದಾಬಾದ್ಗೆ ತೆರಳಿದ್ದರಿಂದ ಸೋಂಕು ಬಂದಿರುತ್ತದೆ. ಇನ್ನಿಬ್ಬರು ಸೋಂಕಿತರಿಗೆ ಪೇಷೆಂಟ್ 514 ರ ವ್ಯಕ್ತಿಯಿಂದ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಮಧ್ಯಾಹ್ನ ಮೂವರಲ್ಲಿ ಸೋಂಕು ಪತ್ತೆಯಾಗಿದ್ದರೆ, ಸಂಜೆಯಾಗುತ್ತಲೇ 35 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಬೆಂಗಳೂರಿನಲ್ಲಿ ಇಂದು ಒಟ್ಟು ನಾಲ್ವರಲ್ಲಿ ಸೋಂಕು ಪತ್ತೆಯಾದಂತಾಗಿದೆ.