Sunday, June 26, 2022
Powertv Logo
Homeರಾಜ್ಯರಾಜ್ಯದಲ್ಲಿ  ಸೋಂಕಿತರ ಸಂಖ್ಯೆ 904 ಕ್ಕೇರಿಕೆ : ಇಂದು ಒಂದೇ ದಿನ 42 ಜನರಲ್ಲಿ ಕೊರೋನಾ...

ರಾಜ್ಯದಲ್ಲಿ  ಸೋಂಕಿತರ ಸಂಖ್ಯೆ 904 ಕ್ಕೇರಿಕೆ : ಇಂದು ಒಂದೇ ದಿನ 42 ಜನರಲ್ಲಿ ಕೊರೋನಾ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಂದು ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ಇಂದು ಒಟ್ಟು 42 ಜನರಲ್ಲಿ ಸೋಂಕು ಪತ್ತೆಯಾಗಿ  ಸೋಂಕಿತರ ಸಂಖ್ಯೆ 904 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪತ್ತೆಯಾದ ಸೋಂಕಿತರಲ್ಲಿ ಗ್ರೀನ್ ಝೋನಾದ ಹಾಸನ ಹಾಗೂ ಯಾದಗಿರಿಯಲ್ಲೂ ಸೋಂಕು ಹರಡಿದೆ.  ಒಂದೂ ಕೊರೋನಾ ಕೇಸ್ ಪತ್ತೆಯಾಗದ ಹಾಸನದಲ್ಲಿ ಇಂದು ಒಂದೇ  ದಿನ 5 ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಗ್ರೀನ್ ಜೋನ್ ವ್ಯಾಪ್ತಿಯಲ್ಲಿದ್ದ ಯಾದಗಿರಿಯಲ್ಲೂ ಇಬ್ಬರಲ್ಲಿ ಕೊರೋನಾ  ಸೋಂಕು ಪತ್ತೆಯಾಗಿದೆ.

ಇಂದು ರಾಜ್ಯದಲ್ಲಿ ಪತ್ತೆಯಾದ ಕೊರೋನಾ ಸೋಂಕಿತರಲ್ಲಿ 25 ಜನರು ಅಹಮದಾಬಾದ್​ಗೆ ಪ್ರಯಾಣ ಬೆಳೆಸಿದವರೇ ಆಗಿದ್ದಾರೆ. ಇನ್ನುಳಿದಂತೆ 6 ಜನರು ಮುಂಬೈಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ಅಹಮದಾಬಾದ್​ಗೆ ತೆರಳಿದ 22 ಜನರಲ್ಲಿ, ಯಾದಗಿರಿಯಲ್ಲಿ  ಇಬ್ಬರು, ಬಾಗಲಕೋಟೆಯಲ್ಲಿ 14 ಜನ, ಧಾರವಾಡದಲ್ಲಿ 9 ಜನರಿಗೆ ಸೋಂಕು ಹರಡಿರುತ್ತದೆ.

ಇನ್ನು ಮುಂಬೈಗೆ ಪ್ರಯಾಣ ಬೆಳಸಿದವರಲ್ಲಿ 6 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ 5 ಜನ ಹಾಸನ ಹಾಗೂ ಒಬ್ಬರು ಮಂಡ್ಯದವಾರಾಗಿದ್ದಾರೆ.

ಇನ್ನುಳಿದಂತೆ ಬೆಂಗಳೂರಿನಲ್ಲಿ  ಮೂವರಲ್ಲಿ ಇಂದು ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಪೇಷೆಂಟ್ ನಂ. 454 ರಿಂದ ಈ ಮೂವರಿಗೂ ಸೋಂಕು ಹರಡಿದೆ. ಬೀದರ್​ನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಇಬ್ಬರು ಕೂಡಾ ಬೀದರ್​ನ ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದರಿಮದ ಸೋಂಕು ಕಂಡುಬಂದಿದೆ. ಇನ್ನು ದಕ್ಷಿಣ ಕನ್ನಡದಲ್ಲಿ ಪೇಷೆಂಟ್ 507 ರ ವ್ಯಕ್ತಿಯಿಂದ ಇಬ್ಬರಲ್ಲೂ ಸೋಂಕು ದೃಢಪಟ್ಟಿದೆ. ಕಲಬುರಗಿಯಲ್ಲಿ  ಒಂದು ಕೇಸ್ ಪತ್ತೆಯಾಗಿದ್ದು, ಪೇಷೆಂಟ್ 529 ರ ವ್ಯಕ್ತಿಯಿಂದ ಸೋಂಕು ತಗುಲಿದೆ. ಬಾಗಲಕೋಟೆಯಲ್ಲಿ 55 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ಪೇಷೆಂಟ್ ನಂ 790 ರ ವ್ಯಕ್ತಿಯಿಂದ 46 ವರ್ಷದ ಪುರುಷನಿಗೆ ಹಾಗೂ ಬಳ್ಳಾರಿಯಲ್ಲಿ 30 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

1 COMMENT

LEAVE A REPLY

Please enter your comment!
Please enter your name here

- Advertisment -

Most Popular

Recent Comments