ರಾಜ್ಯದಲ್ಲಿಂದು ಒಂದೇ ದಿನ 127 ಮಂದಿಯಲ್ಲಿ ಕೊರೋನಾ ಪಾಸಿಟಿವ್ : ಮೂವರು ಸೋಂಕಿತರು ಸಾವು

0
462

ಬೆಂಗಳೂರು:  ರಾಜ್ಯದಲ್ಲಿ ಕೋವಿಡ್-19 ತನ್ನಕದಂಬ ಬಾಹುವನ್ನು ಚಾಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 127 ಜನರಲ್ಲಿ ಸೊಂಕು ಪತ್ತೆಯಾಗಿದ್ದು,ಈವರಗೆ 1,373 ಜನರಲ್ಲಿ ಸೊಂಕು ದೃಢಪಟ್ಟಿದೆ. ಇಂದು ರಾಜ್ಯದಲ್ಲಿ ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. 

ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ಹೆಚ್ಚಿನವರೆಲ್ಲರೂ ಹೊರ ರಾಜ್ಯದಿಂದಲೇ ಬಂದವರಾಗಿದ್ದಾರೆ. ಅದರಲ್ಲೂ  ಮಂಡ್ಯ ಮುಂಚೂಣಿಯಲ್ಲಿದ್ದು, ಮಂಡ್ಯ ಒಂದೇ ಕಡೆ 62 ಜನರಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಮುಂಬೈಗೆ ಪ್ರಯಾಣ ಬೆಳೆಸಿದವರೇ ಆಗಿದ್ದಾರೆ. ಇನ್ನುಳಿದಂತೆ ದಾವಣಗೆರೆಯಲ್ಲಿ 19 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿಯಲ್ಲಿ 11ಜನ, ಶಿವಮೊಗ್ಗದಲ್ಲಿ 12,  ಬೆಂಗಳೂರಿನಲ್ಲಿ 6 ಜನ, ಉಡುಪಿ 4, ಚಿಕ್ಕಮಗಳೂರು 2, ಹಾಸನ 3, ಉತ್ತರ ಕನ್ನಡ 4 ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಯಾದಗಿರಿ, ವಿಜಯಪುರ, ಗದಗ ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದೊಂದು ಕೊರೋನಾ ಕೇಸ್ ಪತ್ತೆಯಾಗಿದೆ.

ಮುಂಬೈ ಪ್ರಯಾಣ ಬೆಳೆಸಿದ್ದರಿಂದ ಮಂಡ್ಯದಲ್ಲಿ ಒಟ್ಟು 62 ಜನರಿಗೆ ಸೋಂಕು ದೃಢಪಟ್ಟಿದೆ. ಕಲಬುರಗಿಯಲ್ಲಿ 11, ಯಾದಗಿರಿಯಲ್ಲಿ 2 ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ. ಉಡುಪಿಯಲ್ಲಿ ಪತ್ತೆಯಾದ ನಾಲ್ವರು ಮುಂಬೈ ಪ್ರಯಾಣ ಬೆಳೆಸಿದವರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಒಬ್ಬರು, ಶಿವಮೊಗ್ಗದಲ್ಲಿ 5 ಜನ, ಗದಗ 1, ಉತ್ತರ ಕನ್ನಡದಲ್ಲಿ ಒಬ್ಬರು ಹಾಗೂ ಹಾಸನದಲ್ಲಿ ಮೂವರಿಗೆ ಮುಂಬೈ ಪ್ರಯಾಣದಿಂದ ಸೋಂಕು ತಗುಲಿದೆ.

ದಾವಣಗೆರೆಯಲ್ಲಿ ಒಟ್ಟು 19 ಜನರಲ್ಲಿ ಸೋಂಕು ಪ್ತತೆಯಾಗಿದ್ದು, ಅದರಲ್ಲಿ ಪೇಷೆಂಟ್ 662 ರ ವ್ಯಕ್ತಿಯಿಂದ 6 ಜನರಿಗೆ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ಪೇಷೆಂಟ್ 633 ರಿಂದ ಇಬ್ಬರಿಗೆ, ಪೇಷೆಂಟ್ 694 ರ ವ್ಯಕ್ತಿಯಿಂದ ಒಬ್ಬರು, ಪೇಷೆಂಟ್ 976 ರ ಸೋಂಕಿತನಿಂದ 4, ಪೇಷೆಂಟ್  663 ರಿಂದ ಒಬ್ಬರಿಗೆ ಹಾಗೂ ಪೇಷೆಂಟ್ 556 ರ ವ್ಯಕ್ತಿಯಿಂದ ಒಬ್ಬರಿಗೆ ಸೋಂಕು ತಗುಲಿದೆ. ಇನ್ನುಳಿದ ನಾಲ್ವರಲ್ಲಿ ಒಬ್ಬರು ದಾವಣಗೆರೆ ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದರಿಂದ ಸೋಂಕು ಬಂದಿದೆ. ಉಳಿದ ಮೂವರಲ್ಲಿ ಇಬ್ಬರು ಗುಜರಾತ್​ನ ಅಹಮದಾಬಾದ್​ ಹಾಗೂ ಮತ್ತೊಬ್ಬ ಸೋಂಕಿತ ಕೇರಳ ಪ್ರಯಾಣದಿಂದ ಸೋಂಕು ತಗುಲಿದೆ.

ಬೆಂಗಳೂರಲ್ಲಿ ಪೇಷೆಂಟ್ 608 ವ್ಯಕ್ತಿಯಿಂದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೊಬ್ಬರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಇನ್ನೊಬ್ಬ ವ್ಯಕ್ತಿ ಬೆಂಗಳೂರು ಕಂಟೈನ್ಮೆಂಟ್ ಝೋನ್​ಗೆ ತೆರಳಿದ್ದರಿಂದ ಸೋಂಕು ಬಂದಿದ್ದು, ಮತ್ತೊಬ್ಬ ಸೋಂಕಿತನಿಗೆ ಸೋಂಕು ತಗುಲಿರುವ ಮೂಲ ಪತ್ತೆಯಾಗಿಲ್ಲ.

ಇನ್ನುಳಿದಂತೆ ಚಿತ್ರದುರ್ಗದಲ್ಲಿ  ಒಬ್ಬರಲ್ಲಿ ಸೋಂಕು ದೃಢಪಟ್ಟಿದ್ದು,ಮೂಲ ಪತ್ತೆಹಚ್ಚಲಾಗುತ್ತಿದೆ. ವಿಜಯಪುರದಲ್ಲಿ ಕಂಟೈನ್ಮೆಂಟ್​ಗೆ ಝೋನ್​ಗೆ ತೆರಳಿದ್ದರಿಂದ ಸೋಂಕು ಬಂದಿದೆ. ಚಿಕ್ಕಮಗಳೂರಿನಲ್ಲೂ ಪತ್ತೆಯಾಗಿರುವ ಸೋಂಕಿತರಲ್ಲಿ ಒಬ್ಬರ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಶಿವಮೊಗ್ಗದಲ್ಲಿ ಪತ್ತೆಯಾದ ಸೋಂಕಿತರಲ್ಲಿ  ಇಬ್ಬರು ಕೇರಳ ಪ್ರಯಾಣ, ಒಬ್ಬರು ಆಂಧ್ರಪ್ರದೇಶ ಪ್ರಯಾಣ, ಇಬ್ಬರು ದಾವಣಗೆರೆಯ ಚನ್ನಗಿರಿಗೆ ಪ್ರಯಾಣ ಬೆಲೆಸಿದ್ದು, ಇನ್ನಿಬ್ಬರಿಗೆ ಸೋಂಕು ಹರಡಿರುವ ಮೂಲ ಪತ್ತೆಯಾಗಿಲ್ಲ. ಇನ್ನು ಉತ್ತರ ಕನ್ನಡದಲ್ಲಿ ಒಬ್ಬರು ಗುಜರಾತ್​ಗೆ ತೆರಳಿದ್ದರಿಂದ ಸೋಂಕು ಬಂದಿದ್ದು, ಇನ್ನೊಬ್ಬರು ಮಹಾರಾಷ್ಟ್ರದ ಸೋಳಾಪುರಕ್ಕೆ ಪ್ರಯಾಣ ಹಾಗೂ ಮತ್ತೊಬ್ಬ ಸೋಂಕಿತ ಮಧುರೈಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ.

ಇಂದು ರಾಜ್ಯದಲ್ಲಿ ಒಟ್ಟು ಮೂವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬಳ್ಳಾರಿ, ವಿಜಯಪುರ ಹಾಗೂ ಬೆಂಗಳೂರಿನಲ್ಲಿ ತಲಾ ಒಬ್ಬರಂತೆ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ. 

LEAVE A REPLY

Please enter your comment!
Please enter your name here