Sunday, May 29, 2022
Powertv Logo
Homeರಾಜ್ಯರಾಜ್ಯದಲ್ಲಿಂದು ಕೇವಲ ಮೂವರಲ್ಲಿ ಕೊರೋನಾ ಸೋಂಕು ದೃಢ : ಸಿಲಿಕಾನ್ ಸಿಟಿ ನಿರಾಳ

ರಾಜ್ಯದಲ್ಲಿಂದು ಕೇವಲ ಮೂವರಲ್ಲಿ ಕೊರೋನಾ ಸೋಂಕು ದೃಢ : ಸಿಲಿಕಾನ್ ಸಿಟಿ ನಿರಾಳ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗದಿರುವುದರಿಂದ ರಾಜ್ಯದ ಜನತೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದಾರೆ. ಇಂದು ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಪ್ರಕಾರ ಬೆಳಗ್ಗೆ ಒಂದು ಕೊರೋನಾ ಪ್ರಕರಣ ಹಾಗೂ ಸಂಜೆ ಬಂದಿರುವ ಬುಲೆಟಿನ್​ನಲ್ಲಿ 2 ಪ್ರಕರಣಗಳು ಕಂಡುಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 503 ಕ್ಕೆ ಏರಿಕೆಯಾಗಿದೆ.

ಇಂದು ಕಲಬುರಗಿಯಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದು, ಒಬ್ಬ ಸೋಂಕಿತ 7 ವರ್ಷದ ಬಾಲಕ ಹಾಗೂ 65 ವರ್ಷದ ವೃದ್ಧೆಗೆ ಸೋಂಕು ದೃಢ ಪಟ್ಟಿದೆ.ಇನ್ನು ಬೆಳಗ್ಗೆ ಬಂದಿರುವ ಹೆಲ್ತ್ ಬುಲೆಟಿನ್ ಪ್ರಕಾರ ಮಂಗಳೂರಿನ ಪಾಣೆಮಂಗಳೂರಿನಲ್ಲಿ ಒಂದು ಕೇಸ್ ಪತ್ತೆಯಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಕೊರೋನಾ ಪ್ರಕರಣ ಪತ್ತೆಯಾಗದೇ ಬೆಂಗಳೂರಿಗರು ನಿರಾಳವಾಗಿದ್ದಾರೆ. 

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments