ಏರಲಿಫ್ಟ್ ಕಾರ್ಯಾಚರಣೆ ಪ್ರಾರಂಭ : ಇಂದು ಸಾವಿರಾರು ಭಾರತೀಯರು ಭಾರತಕ್ಕೆ ವಾಪಸ್

0
937

ನವದೆಹಲಿ: ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುವ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಮೂಲಕ 2ಲಕ್ಷ  ಭಾರತೀಯರು ಭಾರತಕ್ಕೆ ಬರಲಿದ್ದಾರೆ. ಹಾಗಾಗಿ ಏರ್​ಲಿಫ್ಟ್ ಮಾಡಲು 64 ವಿಮಾನಗಳನ್ನು ಬಳಕೆ ಮಾಡಲಾಗುತ್ತಿದೆ.

ಇಂದಿನಿಂದ ಈ ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದು, ಇಂದು ಅಬುದಾಬಿಯಿಂದ ಕೊಚ್ಚಿಗೆ 209 ಜನರನ್ನು ಕರೆತರಲು ಪ್ರಯತ್ನಿಸಲಾಗುತ್ತಿದೆ. ಇನ್ನು ಮಾಲ್ಡೀವ್ಸ್ ಹಾಗೂ ಯುನೈಟೆಡ್ ಅರಬ್​ ಎಮಿರೇಟ್ಸ್​ಗೆ ಎರಡು ಯುದ್ಧ ನೌಕೆಗಳನ್ನು ಕಳಿಸಿಕೊಡಲಾಗಿದೆ. ಅಲ್ಲದೆ ಗಲ್ಫ್ ದೇಶದಲ್ಲಿರುವ ಭಾರತೀಯರನ್ನು  ಕರೆತರಲು 14 ಯುದ್ಧ ವಿಮಾನಗಳನ್ನು ಕಳುಹಿಸುವ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಮೊದಲ ಕಾರ್ಯಾಚರಣೆಯಲ್ಲಿ ಒಟ್ಟು 10,823 ಜನರನ್ನು ಭಾರತೀಯರನ್ನು ಕರೆತರಲು ಪ್ರಯತ್ನಿಸಿದ್ದಾರೆ. 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,784 ವಲಸಿಗರು, ವೃತ್ತಿ ನಿರತರು ಹಾಗೂ 557 ಹಡಗು ಸಿಬ್ಬಂದಿಗಳನ್ನು ಭಾರತಕ್ಕೆ ಕರೆತರಲು ನಿರ್ಧರಿಸಿದ್ದಾರೆ. ಕೆನಾಡದಿಂದ 328, ಯು.ಎಸ್‌.ಎ‌ಯಿಂದ 927, ಯುಎಇಯಿಂದ 2,575, ಕತಾರ್​ನಿಂದ 414 ಹಾಗೂ ಸೌದಿ ಅರೇಬಿಯದಿಂದ 927 ಜನರನ್ನು ಕರೆತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

LEAVE A REPLY

Please enter your comment!
Please enter your name here