ಇಂದಿನಿಂದ ಎರಡನೇ ಹಂತದ ಏರ್​ಲಿಫ್ಟ್ ಕಾರ್ಯಾಚರಣೆ ಪ್ರಾರಂಭ : ಕರ್ನಾಟಕಕ್ಕೆ ಬರಲಿದೆ 17 ವಿಮಾನಗಳು

0
662

ಬೆಂಗಳೂರು: ಮಹಾಮಾರಿ ಕೊರೋನಾದಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಐತಿಹಾಸಿಕ ಏರ್​ಲಿಫ್ಟ್ ಕಾರ್ಯಗಳನ್ನು ಮಾಡುತ್ತಿದ್ದು, ಇದೀಗ ಮೊದಲನೇ ಹಂತದ ಏರ್​ಲಿಫ್ಟ್ ಅಂತ್ಯಗೊಂಡು ಇಂದಿನಿಂದ ಎರಡನೇ ಹಂತ ಏರ್​ಲಿಫ್ಟ್ ಕಾರ್ಯಚರಣೆ ಪ್ರಾರಂಭವಾಗುತ್ತಿದೆ.

ಮೊದಲನೇ ಹಂತದ ಏರ್​ಲಿಫ್ಟ್​ ಮೇ 13ಕ್ಕೆ ಅಂತ್ಯಗೊಂಡಿದ್ದು, ಇಂದಿನಿಂದ ಮೇ 22 ರವರೆಗೆ ಎರಡನೇ ಹಂತದ ಏರ್​ಲಿಫ್ಟ್ ಕಾರ್ಯಾಚರಣೆ ನಡೆಯಲಿದೆ. ಇನ್ನು ಈ ಹಂತದಲ್ಲಿ 31 ದೇಶಗಳಿಂದ  ಭಾರತೀಯರನ್ನು ಕರೆತರಲಿದ್ದು, ದೇಶದ 15 ನಗರಗಳಿಗೆ ಒಟ್ಟು 149 ವಿಮಾನಗಳು ಬಂದು ಇಳಿಯಲಿವೆ. 

ಈ ಬಾರಿ ಕರ್ನಾಟಕಕ್ಕೆ ಒಟ್ಟು 14 ದೇಶಗಳಿಂದ 17 ವಿಮಾನಗಳು ಬರಲಿದೆ. ಅಮೆರಿಕಾದಿಂದ 3, ಕೆನಾಡಾದಿಂದ 2, ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಓಮನ್, ಫಿಲಿಫೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್ ಹಾಗೂ ಆಸ್ಟ್ರೇಲಿಯದಿಂದ ತಲಾ ಒಂದು ವಿಮಾನಗಳು ಬರಲಿವೆ.

LEAVE A REPLY

Please enter your comment!
Please enter your name here