Sunday, May 29, 2022
Powertv Logo
Homeರಾಜ್ಯಕೊರೋನಾ ವೈರಸ್​ನಿಂದ ಸ್ವಲ್ಪ ಮಟ್ಟಿಗೆ ರಿಲೀಫಾದ ರಾಜ್ಯದ ಜನತೆ : ರಾಜ್ಯದಲ್ಲಿಂದು ಒಂದೇ ಪ್ರಕರಣ ದೃಢ

ಕೊರೋನಾ ವೈರಸ್​ನಿಂದ ಸ್ವಲ್ಪ ಮಟ್ಟಿಗೆ ರಿಲೀಫಾದ ರಾಜ್ಯದ ಜನತೆ : ರಾಜ್ಯದಲ್ಲಿಂದು ಒಂದೇ ಪ್ರಕರಣ ದೃಢ

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ವೈರಸ್​ನಿಂದ ಭಯಭೀತರಾಗಿದ್ದ ರಾಜ್ಯದ ಜನತೆ ಇಂದು ನಿಟ್ಟುಸಿರು ಬಿಡುವಂತಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಕೇವಲ ಒಂದು ಕೋವಿಡ್-19 ಪ್ರಕರಣ ಮಾತ್ರ ದಾಖಲಾಗಿದೆ.

ಇಂದು ಮಂಗಳೂರಿನ ಪಾಣೆಮಂಗಳೂರಿನಲ್ಲಿ 47 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದ್ದು, ಆ ಮಹಿಳೆಗೆ ಪೇಷೆಂಟ್ ನಂ.432 ಸಂಪರ್ಕದಿಂದ ಕೋರೋನಾ ಸೋಂಕು ಹರಡಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 501 ಕ್ಕೆ ಏರಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ.

ಶನಿವಾರ ಕೋವಿಡ್-19 ಸೋಂಕಿತರ ಎರಡು ಹೆಲ್ತ್ ಬುಲೆಟಿನ್ ಪ್ರಕಟವಾಗಿದ್ದು, ಬೆಂಗಳೂರು ಒಂದರಲ್ಲೇ ಒಟ್ಟು 13 ಕೊರೋನಾ ಕೇಸ್​ಗಳು ಪತ್ತೆಯಾಗಿದ್ದವು. ಅದರಲ್ಲಿ 6 ಕೇಸ್​ಗಳು ಬೆಳಗ್ಗಿನ ವರದಿಯಲ್ಲಿ ಪತ್ತೆಯಾಗಿದ್ದರೆ, ಇನ್ನುಳಿದ 7 ಪ್ರಕರಣಗಳು ಸಂಜೆಯ ಹೆಲ್ತ್ ಬುಲೆಟಿನ್​ನಲ್ಲಿ ಕಂಡುಬಂದಿತ್ತು. ಈ ಮೂಲಕ ಸೋಂಕಿತರ ಸಂಖ್ಯೆ  133 ಕ್ಕೇರಿದೆ.

ಇನ್ನು ಬೆಳಗಾವಿಯಲ್ಲಿ ಒಟ್ಟು 54 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಅದರಲ್ಲಿ ಶನಿವಾರ ಬೆಳಗ್ಗೆ  6 ಜನ ಸೋಂಕಿತರು ಹಾಗೂ 3 ಜನ ಸೋಂಕಿತರು ಸಂಜೆ ವೇಳೆಗೆ ಪತ್ತೆಯಾಗಿದ್ದಾರೆ. ಮಂಡ್ಯ , ಚಿಕ್ಕಬಳ್ಳಾಪುರ, ಮೈಸೂರಿನ ನಂಜನಗೂಡು ಹಾಗೂ ಮಂಗಳೂರಿನ ಬಂಟ್ವಾಳದಲ್ಲಿ ತಲಾ ಒಬ್ಬರಲ್ಲಿ ಸೋಂಕು ಹರಡಿದೆ. ಈ ಮೂಲಕ ಶನಿವಾರ ಒಂದೇ ದಿನದಲ್ಲಿ ಒಟ್ಟು 26 ಜನರಿಗೆ ಸೋಂಕು ಹರಡಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments